PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!

congo rangers selfie
Published on

ಕಾಂಗೊ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ವಿರುಂಗಾ ನ್ಯಾಷನಲ್ ಪಾರ್ಕ್​ನಲ್ಲಿ ಗೊರಿಲ್ಲಾಗಳ ಜತೆಗೆ ನಿಂತು ಅವುಗಳ ರಕ್ಷಕರು ತೆಗೆದಿದ್ದ ಸೆಲ್ಫಿ ಪ್ರಪಂಚದ ಗಮನಸೆಳೆದಿತ್ತು. ಈ ಬೆಳವಣಿಗೆಯ ಬೆನ್ನಿಗೇ ಗೊರಿಲ್ಲಾಗಳ ರಕ್ಷಕರ ಮೇಲೆ ಭೀಕರ ದಾಳಿ ನಡೆದಿದ್ದು 12 ಜನ ಹತರಾಗಿದ್ದಾರೆ.

ಗೊರಿಲ್ಲಾಗಳು ಅವನತಿಯ ಅಂಚಿನಲ್ಲಿ ಇರುವ ಕಾರಣ ಅವುಗಳಿಗೆ ಗರಿಷ್ಠ ಭದ್ರತೆಯನ್ನು ಅಲ್ಲಿನ ಸರ್ಕಾರ ನೀಡಿದೆ. ಈ ಗೊರಿಲ್ಲಾಗಳು ಅಲ್ಲಿನ ವಿರುಂಗಾ ನ್ಯಾಷನಲ್ ಪಾರ್ಕಿನಲ್ಲಿದ್ದು, ಅಲ್ಲಿ 15 ರೇಂಜರ್​ಗಳು ಅವುಗಳ ಕಾವಲಿಗಿದ್ದರು. ಕಾಂಗೋಲಿಸ್ ಮೇಜರ್​ ಜನರಲ್​ ಮೌರಿಸ್ ಅಗುರು ಮಾಂಬಾ ಹೇಳುವ ಪ್ರಕಾರ, ಡೆಮಾಕ್ರಟಿಕ್ ಫೋರ್ಸಸ್ ಫಾರ್​ ದ ಲಿಬರೇಷನ್ ರವಾಂಡಾ(ಎಫ್​ಡಿಎಲ್​ಆರ್​) ತಂಡ ಈ ದಾಳಿಯನ್ನು ಏಪ್ರಿಲ್ 24ರಂದು ನಡೆಸಿದ್ದು, 12 ರೇಂಜರ್ಸ್​ ಅನ್ನು ಭೀಕರವಾಗಿ ಹತ್ಯೆ ಮಾಡಿದೆ. ಅಂದಾಜು 60 ಎಫ್​​ಡಿಎಲ್​ಆರ್​ ಬಂಡುಕೋರರು ಈ ದಾಳಿಯನ್ನು ನಡೆಸಿದ್ದು ಒಟ್ಟು 17 ಜನ ಸಾವನ್ನಪ್ಪಿದ್ದಾರೆ. ಇತರರು ಗಂಭೀರ ಗಾಯಗೊಂಡಿದ್ದಾರೆ.

ಈ ದಾಳಿ ನಡೆಯುವುದಕ್ಕೂ ಕೆಲವು ದಿನಗಳ ಹಿಂದಷ್ಟೇ ರೇಂಜರ್ ಮ್ಯಾಥ್ಯೂ ಶಮವು ಎರಡು ಗೊರಿಲ್ಲಾಗಳು ಪಕ್ಕದಲ್ಲಿ ನಿಂತಿದ್ದಾಗ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದ್ದರು. ಈ ದಾಳಿಯಲ್ಲಿ ಅವರಿಗೆ ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ದಾಳಿಯ ಹಿಂದಿನ ಉದ್ದೇಶವೂ ಬಹಿರಂಗವಾಗಿಲ್ಲ. ಅದೇನೇ ಇದ್ದರೂ, ಈ ಪಾರ್ಕ್​ 2014ರಲ್ಲಿ ಆಸ್ಕರ್ ನಾಮನಿರ್ದೇಶಿತ ಸಾಕ್ಷ್ಯಚಿತ್ರದ ಕೇಂದ್ರ ಬಿಂದುವಾಗಿತ್ತು.

ಕಳೆದ 20 ವರ್ಷಗಳ ಅವಧಿಯಲ್ಲಿ ಈ ಪಾರ್ಕ್​ನಲ್ಲಿ ಗೊರಿಲ್ಲಾಗಳ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ 176 ರೇಂಜರ್​ಗಳು ಪ್ರಾಣ ಕಳೆದುಕೊಂಡಿದ್ದಾರೆ. ರೇಂಜರ್​ಗಳು ಎಂದರೆ ಅವರು ಸಶಸ್ತ್ರಗಳನ್ನು ಹೊಂದಿದ್ದು, ಜತೆಗೆ ಸ್ನಿಫರ್​ ಡಾಗ್ಸ್ ಗಳನ್ನೂ ಹೊಂದಿರುತ್ತಾರೆ. ಗೊರಿಲ್ಲಾಗಳು, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ನ್ಯಾಷನಲ್ ಪಾರ್ಕ್​ನ ಭದ್ರತೆ, ಸುರಕ್ಷತೆ ಇವರ ಹೊಣೆಗಾರಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net