'ಫೀನಿಕ್ಸ್' ಆಗಿ ಚಿತ್ರರಂಗಕ್ಕೆ ಸೂರ್ಯ ಸೇತುಪತಿ ಎಂಟ್ರಿ!

Untitled design (23)
Published on

​ತಮಿಳುನಾಡು: ಕಾಲಿವುಡ್​ನ ಸ್ಟಾರ್​ ಹೀರೋ, ಬಹುಭಾಷಾ ನಟ ವಿಜಯ್ ಸೇತುಪತಿ ಅವರ ಪುತ್ರ ಸೂರ್ಯ ಸೇತುಪತಿ ಇದೀಗ ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದು, 'ಫೀನಿಕ್ಸ್' ಮೂಲಕ ಭರ್ಜರಿಯಾಗಿ ಎಂಟ್ರಿ ಕೊಡಲು ಸಕಲ ತಯಾರಿಗಳೊಂದಿಗೆ ಸಿದ್ಧರಾಗುತ್ತಿದ್ದಾರೆ.

ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ವಿಭಿನ್ನ ಹಾಗೂ ವಿಶೇಷ ಪಾತ್ರಗಳನ್ನು ನಿರ್ವಹಿಸಿರುವ ವಿಜಯ್​ ಸೇತುಪತಿ, ಅಪಾರ ಸಿನಿಪ್ರಿಯರನ್ನು ಮನರಂಜಿಸಿ ಅವರಿಂದ ಅತ್ಯುತ್ತಮ ನಟ ಎಂಬ ಪಟ್ಟವನ್ನು ಗಳಿಸಿದ್ದು, ಇದೀಗ ತಮ್ಮ ಪುತ್ರನನ್ನು ನಾಯಕ ನಟನಾಗಿ ಚಿತ್ರರಂಗಕ್ಕೆ ಕರೆತರುವ ಮೂಲಕ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಪರಿಚಯಿಸಲು ಮುಂದಾಗಿದ್ದಾರೆ.

ಸದ್ಯ ಈ ಸಂಗತಿ ಅರಿತ ವಿಜಯ್​ ಸೇತುಪತಿ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸಂತಸವನ್ನು ವ್ಯಕ್ತಪಡಿಸಿದ್ದು, ವಿಜಯ್​ ಪುತ್ರನಿಗೆ ಅಭಿನಂದನೆ ತಿಳಿಸಿ ಶುಭಹಾರೈಸಿದ್ದಾರೆ. ಇಂದು ಚೆನ್ನೈನ ಐಕಾನಿಕ್ ಎವಿಎಂ ಸ್ಟುಡಿಯೋದಲ್ಲಿ ಚಿತ್ರದ ಔಪಚಾರಿಕ ಪೂಜೆ ಸಮಾರಂಭ ನಡೆಸಿದ ಚಿತ್ರತಂಡ, ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಲಿರುವ ಸಿನಿಮಾದ ಹೆಸರು 'ಫೀನಿಕ್ಸ್' ಎಂಬುದನ್ನು ಅಧಿಕೃತವಾಗಿ ಘೋಷಿಸಿತು.

'ಇಂಡಿಯನ್ 2', 'ಜವಾನ್', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್', 'ಬಿಗಿಲ್' ಸೇರಿದಂತೆ ಮುಂತಾದ ಚಿತ್ರಗಳಲ್ಲಿನ ಅದ್ಬುತ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಕೊರಿಯೋಗ್ರಾಫ್​ ಮಾಡಿದ್ದ ಹಿರಿಯ ಸ್ಟಂಟ್ ಕೊರಿಯೋಗ್ರಾಫರ್ ಅನ್ಲ್ ಅರಸು ಈ ಸಿನಿಮಾವನ್ನು ನಿರ್ದೇಶಿಸಲಿದ್ದು, ಇದು ಅವರ ಚೊಚ್ಚಲ ನಿರ್ದೇಶನವಾಗಲಿದೆ.

ಮಾಸ್-ಆಕ್ಷನ್ ಎಂಟರ್‌ಟೈನರ್ ಎಂದು ಹೇಳಲಾದ 'ಫೀನಿಕ್ಸ್' ಚಿತ್ರಕ್ಕೆ ಸ್ಯಾಮ್ ಸಿಎಸ್ ಸಂಗೀತ ಸಂಯೋಜಿಸಿದ್ದಾರೆ. ರಾಜಲಕ್ಷ್ಮಿ ಅರಶಕುಮಾರ್ ಬ್ರೇವ್ ಮ್ಯಾನ್ ಪಿಕ್ಚರ್ಸ್ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net