More

    ಅಪ್ಪ ರೂಮ್​ನಲ್ಲಿದ್ದಾರೆ ಇನ್ನೊಂದು ತಿಂಗಳಲ್ಲಿ ನಗ್ತಾರೆ… ರೋಹಿತ್​ ಪುತ್ರಿಯ ವಿಡಿಯೋ ವೈರಲ್​

    ನವದೆಹಲಿ: ಸೆಮಿಫೈನಲ್​ವರೆಗಿನ ಹತ್ತೂ ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದ ಭಾರತ, ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಟ್ರೋಫಿ ಕಳೆದುಕೊಂಡ ನೋವು ಅಸಂಖ್ಯಾತ ಭಾರತೀಯರ ಮನದಲ್ಲಿ ಇನ್ನೂ ಹಸಿಯಾಗಿದೆ. ನಾಯಕ ರೋಹಿತ್​ ಶರ್ಮರಂತೂ ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಹೀಗಾಗಿ ಟೂರ್ನಿಯ ಬಳಿಕ ಎಲ್ಲೂ ಕಾಣಿಸಿಕೊಳ್ಳದೆ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ.

    ಫೈನಲ್​ ಸೋತ ಬೆನ್ನಲ್ಲೇ ನಾವಿಂದು ಉತ್ತಮವಾಗಿ ಆಡಲಿಲ್ಲ ಎಂದು ಸ್ವತಃ ರೋಹಿತ್​ ಶರ್ಮ ಹೇಳಿಕೊಂಡರು. ಅದೇ ನೋವಿನಲ್ಲಿ ಹೊರಗಡೆ ಬಾರದ ರೋಹಿತ್,​ ಚಿಂತೆಯಲ್ಲೇ ಮುಳುಗಿರುವ ಈ ಸಮಯದಲ್ಲಿ ಅವರ ಐದು ವರ್ಷದ ಮಗಳು ಸಮೈರಾ ಮಾತನಾಡಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗುತ್ತಿದ್ದು, ಪ್ರಸ್ತುತ ಸನ್ನಿವೇಶಕ್ಕೂ ವಿಡಿಯೋದಲ್ಲಿ ರೋಹಿತ್​ ಪುತ್ರಿ ಹೇಳಿರುವ ಮಾತಿಗೂ ಹೊಂದಾಣಿಕೆಯಾಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ತಾಯಿ ರಿತಿಕಾ ಸಾಜ್ದೇಹ್​ ಜತೆ ಕಟ್ಟಡವೊಂದರಿಂದ ಹೊರಗೆ ಬರುವ ಸಮೈರಾ, ಮಾಧ್ಯಮದವರನ್ನು ನೋಡಿ ತನ್ನ ಪುಟ್ಟ ಕೈಗಳಿಂದ ಕೈ ಬೀಸುತ್ತಾರೆ. ಸುದ್ದಿಗಾರರು ಕೂಡ ಸಮೈರಾ ಕಡೆ ಕೈಬೀಸುತ್ತಾರೆ. ಸ್ವಲ್ಪ ದೂರ ಹೋಗಿ ನಿಲ್ಲುವ ಸಮೈರಾ, ಮಾಧ್ಯಮದವರ ಮುಂದೆ ತನ್ನ ತಂದೆ ರೋಹಿತ್​ ಬಗ್ಗೆ ಮಾತನಾಡುತ್ತಾರೆ. ಸಮೈರಾ ಮತ್ತು ವರದಿಗಾರನ ನಡುವೆ ಸಂಭಾಷಣೆ ಈ ಕೆಳಕಂಡಂತಿದೆ.

    ವರದಿಗಾರ: ನಿಮ್ಮ ತಂದೆ ಎಲ್ಲಿ?
    ಸಮೈರಾ: ಅವರ ಕೋಣೆಯಲ್ಲಿದ್ದಾರೆ.
    ವರದಿಗಾರ: ಅವರು ಹುಶಾರಾಗಿದ್ದಾರೆಯೇ?
    ಸಮೈರಾ: ಅವರು ಬಹುತೇಕ ಪಾಸಿಟಿವ್​ ಆಗಿದ್ದಾರೆ… ಆದರೆ ಇನ್ನೂ ಒಂದೇ ತಿಂಗಳಲ್ಲಿ ಅವರು ನಗುತ್ತಾರೆ.

    ಹಳೆಯ ವಿಡಿಯೋ?
    ಸದ್ಯ ವೈರಲ್​ ಆಗಿರುವ ರೋಹಿತ್​ ಪುತ್ರಿಯ ವಿಡಿಯೋ ಹಳೆಯದು. ರೋಹಿತ್​ಗೆ ಕೋವಿಡ್​ ಪಾಸಿಟಿವ್​ ಆಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲೆಂದು ಅವರ ಕುಟುಂಬ ಯುನೈಟೆಡ್​ ಕಿಂಗ್​ಡಮ್​ಗೆ ತೆರಳಿತ್ತು. ಈ ವೇಳೆ ಮಾಧ್ಯಮದವರ ಮುಂದೆ ಸಮೈರಾ, ತಮ್ಮ ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮುಗ್ಧತೆ ಮತ್ತು ಆತ್ಮವಿಶ್ವಾಸದೊಂದಿಗೆ ಏಕಾಂಗಿಯಾಗಿ ಮಾಧ್ಯಮವನ್ನು ಆಕೆ ಎದುರಿಸಿದ ರೀತಿ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

    ಅಂದಹಾಗೆ ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತರೂ ರೋಹಿತ್ ಶರ್ಮರ ನಿರ್ಭೀತ ಬ್ಯಾಟಿಂಗ್ ಮತ್ತು ಮಾದರಿ ನಾಯಕತ್ವವು ಜಗತ್ತಿನ ಎಲ್ಲ ಮೂಲೆಗಳಿಂದ ತುಂಬಾ ಪ್ರಶಂಸೆಯನ್ನು ಗಳಿಸಿತು. 11 ಪಂದ್ಯಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿದಂತೆ 54.27 ರನ್​ ಸರಾಸರಿಯಲ್ಲಿ 597 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ವಿಶ್ವಕಪ್​ ಅಭಿಯಾನ ಮುಗಿಸಿದರು.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. (ಏಜೆನ್ಸೀಸ್​)

    ವಿಶ್ವಕಪ್​ ಫೈನಲ್​ನಲ್ಲಿ​ ಭಾರತ ಹೀನಾಯ ಸೋಲು: ರೋಹಿತ್​ ಶರ್ಮ ಕೊಟ್ಟ ಕಾರಣ ಹೀಗಿದೆ…

    ಕೊನೇ ಎಸೆತದಲ್ಲಿ ರಿಂಕು ಸಿಂಗ್​ ಸಿಡಿಸಿದ ಸಿಕ್ಸರ್​ ವ್ಯರ್ಥವಾಗಿದ್ದೇಕೆ? ಗೆಲುವಿನ ಸಿಕ್ಸರ್​ಗೆ “ನೋ” ಎಂದ ಅಂಪೈರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts