More

    ಓ ಮನಸೇ ಈ ವಾರ ತೆರೆಗೆ; ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಶೆಟ್ಟಿ ನಟಿಸಿರುವ ಚಿತ್ರ

    ಬೆಂಗಳೂರು: ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತ್ರಿಕೋನ ಪ್ರೇಮಕಥೆ ‘ಓ ಮನಸೇ’. ಉಮೇಶ್ ಗೌಡ ನಿರ್ದೇಶನದ ಈ ಚಿತ್ರದ ಈ ಶುಕ್ರವಾರ (ಜು.14) ರಾಜ್ಯಾದ್ಯಂತ ತೆರೆಗೆ ಬರಲಿದೆ.

    ವಿಜಯ್ ರಾಘವೇಂದ್ರ, ‘ಉಮೇಶ್ ಹಾಗೂ ಸಂಭಾಷಣೆಕಾರ ಸಾಯಿಕೃಷ್ಣ ಬಂದು ಕಥೆ ಹೇಳಿದರು. ಶಿಕ್ಷಣಕ್ಕೆ ಮಹತ್ವ ಕೊಡುವ ಕಥಾಹಂದರವಿರುವ ಚಿತ್ರವಿದು. ಹೀಗಾಗಿಯೇ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಲವ್, ಸಸ್ಪೆನ್ಸ್ ಕೂಡ ಇದೆ. ನಾನಿಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಮಾಹಿತಿ ನೀಡಿದರು. ಮತ್ತೊಬ್ಬ ನಾಯಕ ಧರ್ಮ ಕೀರ್ತಿರಾಜ್, ‘ನಾನು ವಿಜಯ್ ರಾಘವೇಂದ್ರ ಜತೆ ನಟಿಸುತ್ತಿರುವ ಮೊದಲ ಚಿತ್ರವಿದು. ನಾವು ದುಡುಕಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಏನೆಲ್ಲಾ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬುದು ಚಿತ್ರದ ಎಳೆ’ ಎಂದು ಹೇಳಿಕೊಂಡರು.

    ಇದನ್ನೂ ಓದಿ: ನನ್ನನ್ನು CSK ತಂಡಕ್ಕೆ ಸೇರಿಸಿಕೊಳ್ಳಿ ಎಂದ ನಟ; ಕ್ಯಾಪ್ಟನ್​ ಕೂಲ್​ ರಿಪ್ಲೈ ವೈರಲ್​

    ಚಿತ್ರಕ್ಕೆ ರಮೇಶ್ ಅದರಂಗಿ ಕಥೆ, ಎಂ.ಆರ್.ಸೀನು ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನವಿರಲಿದೆ. ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಜತೆ ಹರೀಶ್ ರಾಯ್, ಸಾಧು ಕೋಕಿಲ, ಶೋಭರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ ಪ್ರಮುಖ ತಾರಾಗಣದಲ್ಲಿದ್ದಾರೆ. ಶ್ರೀ ್ರೆಂಡ್ಸ್ ಮೂವೀ ಮೇಕರ್ ಬ್ಯಾನರ್‌ನಲ್ಲಿ ಗೆಳೆಯರಾದ ಭೈರೇಗೌಡ, ಧನಂಜಯ್, ಯುವರಾಜು, ರಾಮು ಮತ್ತು ವೆಂಕಟೇಶ್ ಜತೆಗೂಡಿ ‘ಓ ಮನಸೇ’ ಸಿನಿಮಾ ನಿರ್ಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts