ಎರಡನೇ ಪತ್ನಿ ಜತೆ ಹನಿಮೂನ್​​ನಲ್ಲಿ ಆಶಿಶ್ ವಿದ್ಯಾರ್ಥಿ..! ದಂಪತಿ ಫೋಟೋ ನೋಡಿ ಫ್ಯಾನ್ಸ್​​ ಹೇಳಿದ್ದೇನು?

blank
blank

ಹೈದರಾಬಾದ್​: ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸುವ ಯಾವುದೇ ಅಗತ್ಯವಿಲ್ಲ. ಬಹುಭಾಷಾ ನಟನಾಗಿ ಗುರುತಿಸಿಕೊಂಡ ಇವರು, ಖಳನಾಯಕರಾಗಿ ಮತ್ತು ಪೋಷಕ ನಟರಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದು ಗೊತ್ತೇ ಇದೆ.

ಎರಡನೇ ಪತ್ನಿ ಜತೆ ಹನಿಮೂನ್​​ನಲ್ಲಿ ಆಶಿಶ್ ವಿದ್ಯಾರ್ಥಿ..! ದಂಪತಿ ಫೋಟೋ ನೋಡಿ ಫ್ಯಾನ್ಸ್​​ ಹೇಳಿದ್ದೇನು?

57 ವರ್ಷದ ಆಶಿಶ್ ವಿದ್ಯಾರ್ಥಿ ಈ ವರ್ಷದ ಮೇ ತಿಂಗಳಲ್ಲಿ, ಅಸ್ಸಾಂನ 33 ವರ್ಷದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾದರು. ಕೋಲ್ಕತ್ತಾದಲ್ಲಿ ನಡೆದ ಅವರ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಹಾಜರಿದ್ದರು.

ಇದನ್ನೂ ಓದಿ: Gruha Jyothi Scheme;  ಸರ್ವರ್‌ ಸಮಸ್ಯೆಯಿಂದ ಅರ್ಜಿಸಲ್ಲಿಸಿದ್ರೂ ನಿಮ್ಮ ಅರ್ಜಿ ಊರ್ಜಿತವಾಗದೇ ಹೋಗಿರಬಹುದು ಇಂದೇ ಪರಿಶೀಲಿಸಿ… 

ಎರಡನೇ ಪತ್ನಿ ಜತೆ ಹನಿಮೂನ್​​ನಲ್ಲಿ ಆಶಿಶ್ ವಿದ್ಯಾರ್ಥಿ..! ದಂಪತಿ ಫೋಟೋ ನೋಡಿ ಫ್ಯಾನ್ಸ್​​ ಹೇಳಿದ್ದೇನು?

ಆಶಿಶ್ ಈ ಹಿಂದೆ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆದರೆ.. ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು. ನಂತರ 2ನೇ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ವ್ಯವಹಾರಕ್ಕೆ ಕೈ ಹಾಕಿದ ನಟ ಉಪೇಂದ್ರ; ಮದುವೆ, ಸಮಾರಂಭಗಳಿಗೆ ಬಾಡಿಗೆಗೆ ಸಿಗಲಿದೆ ತೋಟದ ಮನೆ

ಆಶಿಶ್ ಅವರ ಎರಡನೇ ಮದುವೆಗೆ ಹಲವು ಟೀಕೆಗಳು ಬಂದಿದ್ದವು. ಅವರು ಪ್ರತಿಕ್ರಿಯಿಸಿ, ತಮ್ಮ ಮೇಲೆ ಬರುತ್ತಿರುವ ಟೀಕೆಗಳನ್ನೆಲ್ಲ ಕೇಳಿಸಿಕೊಂಡ ಅವರು, ಮದುವೆಯಾಗುವುದು ಕೇವಲ ದೈಹಿಕ ಸುಖಕ್ಕಾಗಿ ಅಲ್ಲ, ಒಡನಾಡಿಗಾಗಿ ಮಾಡಿದ್ದೇನೆ ಎಂದು ಹೇಳಿದರು. ಆದರೆ ಇದೀಗ ಈ ಜೋಡಿಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಆಶಿಶ್ ಮತ್ತು ರೂಪಾಲಿ ಬರುವಾ ಇತ್ತೀಚೆಗೆ ಹನಿಮೂನ್‌ಗೆ ತೆರಳಿದ್ದರು. ಇಂಡೋನೇಷ್ಯಾದ ಬಾಲಿಯಲ್ಲಿ ಆನಂದಿಸುತ್ತಿದ್ದಾರೆ. ರೂಪಾಲಿ ಈ ಸಂಬಂಧ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:  ಜೈಲಿಗೆ ಹೋಗುವ ಭಯದಿಂದ ಪೊಲೀಸ್ ಠಾಣೆಯಲ್ಲೇ ಹಲ್ಲಿಯನ್ನು ನುಂಗಿದ ಆರೋಪಿ!

ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಕುಳಿತುಕೊಂಡಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ. ಈ ಬಗ್ಗೆ ನೆಟ್ಟಿಗರು ವಯಸ್ಸಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

VIDEO| ಪ್ರಧಾನಿಯಾಗಲು ರಾಹುಲ್ ಗಾಂಧಿಗೆ ಸೂಪರ್ ಐಡಿಯಾ ನೀಡಿದ ರಾಖಿ ಸಾವಂತ್!

Share This Article

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…