More

    ನನ್ನನ್ನು CSK ತಂಡಕ್ಕೆ ಸೇರಿಸಿಕೊಳ್ಳಿ ಎಂದ ನಟ; ಕ್ಯಾಪ್ಟನ್​ ಕೂಲ್​ ರಿಪ್ಲೈ ವೈರಲ್​

    ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ತಮಿಳುನಾಡಿನಲ್ಲಿ ತುಸು ಹೆಚ್ಚು ಎಂದು ಹೇಳಬಹುದು. ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸುವ ಅವರಿಗೆ ತಮಿಳುನಾಡಿನ ಜನತೆ ತಲಾ ಎಂದು ಕರೆಯುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಮಹೇಂದ್ರ ಸಿಂಗ್​ ಧೋನಿ ದಂಪತಿಗಳು ನಿರ್ಮಿಸಿರುವ ಚೊಚ್ಚಲ ತಮಿಳು ಸಿನಿಮಾ LGM (Let’s Get Married) ಚಿತ್ರ ಧ್ವನಿಸಾಂದ್ರಿಕೆ ಹಾಗೂ ಟ್ರೇಲರ್​ಅನ್ನು ಜುಲೈ 10ರಂದು ಚೆನ್ನೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

    ವಿಭಿನ್ನ ಮ್ಯಾನರಿಸಂ, ಡೈಲಾಗ್​ ಡೆಲಿವರಿ ಹಾಗೂ ಪಂಚ್​ಗಳ ಮೂಲಕ ಕಾಲಿವುಡ್​ನಲ್ಲಿ ಹೆಸರುವಾಸಿಯಾಗಿರುವ ಜನಪ್ರಿಯ ಹಾಸ್ಯನಟ ಯೋಗಿ ಬಾಬು ಸಹ LGM ಚಿತ್ರದಲ್ಲಿ ನಟಿಸಿದ್ದು, ಕಾರ್ಯಕ್ರಮದಲ್ಲಿ ಧೋನಿ ಅವರಿಗೆ ವಿಶಿಷ್ಟ ಮನವಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ನನ್ನನ್ನು CSK ತಂಡಕ್ಕೆ ಸೇರಿಸಿಕೊಳ್ಳಿ ಎಂದ ನಟ; ಕ್ಯಾಪ್ಟನ್​ ಕೂಲ್​ ರಿಪ್ಲೈ ವೈರಲ್​

    ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ; ಆಗಸ್ಟ್​ 2ರಿಂದ ಅರ್ಜಿಗಳ ವಿಚಾರಣೆ: ಸುಪ್ರೀಂ ಕೋರ್ಟ್​

    ಚಿತ್ರದ ಆಡಿಯೋ ಹಾಗೂ ಟ್ರೇಲರ್​ ಲಾಂಚ್​ ಈವೆಂಟ್​ ಉದ್ದೇಶಿಸಿ ಮಾತನಾಡಿದ ಯೋಗಿ ಬಾಬು ತಮ್ಮನ್ನು ಮುಂದಿನ ವರ್ಷ ನಡೆಯುವ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ನಟ ಯೋಗಿ ಬಾಬು ಮಾತಿಗೆ ಧೋನಿ ಕೊಟ್ಟ ಕೂಲ್​ ರಿಪ್ಲೈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಧೋನಿ ಸದ್ಯಕ್ಕೆ ಚೆನ್ನೈ ತಂಡದಲ್ಲಿ ಅಂಬಟಿ ರಾಯುಡು ನಿವೃತ್ತರಾಗಿದ್ದು, ಅವರ ಜಾಗಕ್ಕೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುವಂತೆ ನಾನು ಮ್ಯಾನೇಜ್​ಮೆಂಟ್​ ಬಳಿ ಮಾತನಾಡುತ್ತೇನೆ. ಆದರೆ, ನೀವು ಸಿನಿಮಾಗಳಲ್ಲಿ ಬ್ಯೂಸಿ ಇರುವ ಕಾರಣ ಸ್ಥಿರವಾಗಿ ಕ್ರಿಕೆಟ್​ ಆಡಬೇಕಾಗಿ ಬರುತ್ತದೆ. ವೇಗವಾದ ಬೌಲಿಂಗ್​ನಿಂದ ನೀವು ಗಾಯಗೊಳ್ಳಬಹುದು ಎಚ್ಚರ ಎಂದು ನಟನ ಮಾತಿಗೆ ತಮ್ಮದೇ ಶೈಲಿಯಲ್ಲಿ ಧೋನಿ ಉತ್ತರಿಸಿದ್ದಾರೆ.

    LGM ಚಿತ್ರವನ್ನು ರಮೇಶ್​ ತಮಿಳ್​ಮನಿ ನಿರ್ದೇಶಿಸಿದ್ದು, ಸಂಗೀತವನ್ನು ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಯೋಗಿ ಬಾಬು, ಮಿರ್ಚಿ ವಿಜಯ್​, ನಾದಿಯಾ ಮೊಯ್ಡು ನಟಿಸಿದ್ದು, 2024ರ ಆರಂಭದಲ್ಲಿ ಸಿನಿಮಾ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts