ಈ ಪ್ಲಾಟ್​ಫಾರಂನಲ್ಲಿ ಹೊಸ ದಾಖಲೆ ಬರೆದ ನಟ ವಿಜಯ್ ದೇವರಕೊಂಡ

Untitled design - 2023-09-24T133028.049
Published on

ಆಂಧ್ರಪ್ರದೇಶ: ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್, ವ್ಯಾಟ್ಸ್​ಆ್ಯಪ್​ ಚಾನೆಲ್‌ ಅನೇಕರ ಗಮನ ಸೆಳೆಯುವಲ್ಲಿ ಪ್ರಮುಖವಾಯಿತು. ಈ ಹೊಸ ವೈಶಿಷ್ಟ್ಯವನ್ನು ಸ್ವಾಗತಿಸಿದ ಬಳಕೆದಾರರು, ತಮ್ಮ ನೆಚ್ಚಿನ ಸ್ಟಾರ್ ನಟರ ಹೆಸರಿನ ಚಾನೆಲ್ ಅನ್ನು ಅಪಾರ ಸಂಖ್ಯೆಯಲ್ಲಿ ಅನುಸರಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ನಟ ವಿಜಯ್​ ದೇವರಕೊಂಡ ಹೊಸ ದಾಖಲೆ ಬರೆದಿದ್ದಾರೆ.

ಟಾಲಿವುಡ್​ನ ಸ್ಟಾರ್​ ನಟ ವಿಜಯ್ ದೇವರಕೊಂಡ ಕೂಡ ವ್ಯಾಟ್ಸ್​ಆ್ಯಪ್​ ಚಾನಲ್​ನ ಹೊಸ ವೈಶಿಷ್ಟ್ಯಕ್ಕೆ ಹೆಜ್ಜೆಯಿಟ್ಟಿದ್ದು, ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಹೊಂದುವ ಮುಖೇನ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ. ತಮ್ಮ ಅಧಿಕೃತ ಚಾನೆಲ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ಗಳನ್ನು ಪಡೆದುಕೊಂಡ ಮೊದಲ ತೆಲುಗು ನಟರಾಗಿದ್ದಾರೆ. ಈ ಸಂಗತಿ ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತಸ ತಂದಿದೆ.

ಇತ್ತೀಚೆಗಷ್ಟೇ ವಿಜಯ್​ ದೇವರಕೊಂಡ ಮತ್ತು ನಟಿ ಸಮಂತಾ ರುತ್​ ಪ್ರಭು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ 'ಖುಷಿ' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿಸಿದ ಗಳಿಕೆಯನ್ನು ಕಂಡಿತು. ಸದ್ಯ ಚಿತ್ರವು ಒಟಿಟಿಗೆ ಎಂಟ್ರಿ ಕೊಡಲಿದ್ದು, ರಿಲೀಸ್​ ದಿನಾಂಕ ಕೂಡಲೇ ಈಗಾಗಲೇ ಪ್ರಕಟಗೊಂಡಿದೆ,(ಏಜೆನ್ಸೀಸ್).‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net