More

    ವಿಜಯ್​ ನಂಬರ್​ 1, ಲಾರೆನ್ಸ್​ ನಂಬರ್​ 2 … ಯಾವುದರಲ್ಲಿ ಗೊತ್ತಾ?

    ಕಳದ ನಾಲ್ಕು ತಿಂಗಳುಗಳಿಂದ ಚಿತ್ರಮಂದಿರಗಳು ಬಂದ್​ ಆಗಿವೆ. ಮೊದಲೆರೆಡು ತಿಂಗಳಲ್ಲಂತೂ ಯಾವ ಚಾನಲ್​ ಹಾಕಿದರೂ ಸಿನಿಮಾಗಳೇ ಪ್ರದರ್ಶನವಾಗುತ್ತಿದ್ದವು. ದೊಡ್ಡ ದೊಡ್ಡ ಸ್ಟಾರ್​ಗಳ ಜನಪ್ರಿಯ ಚಿತ್ರಗಳೆಲ್ಲಾ ಒಂದು ರೌಂಡ್​ ಪ್ರಸಾರವಾದವು.

    ಇದನ್ನೂ ಓದಿ: ‘ಪಾನಿ’ ನಿಲ್ಲೋಕೆ ಕಾರಣ ಯಾರು ಗೊತ್ತಾ? ಆದಿತ್ಯ ಚೋಪ್ರಾ ಹೇಳ್ತಾರೆ ಕೇಳಿ …

    ಈ ಪೈಕಿ ದೊಡ್ಡ ದೊಡ್ಡ ಸ್ಟಾರ್​ಗಳ ಚಿತ್ರಗಳು, ಹಳೆಯ ಕ್ಲಾಸಿಕ್​ ಚಿತ್ರಗಳು, ಪ್ರಶಸ್ತಿ ವಿಜೇತ ಚಿತ್ರಗಳು … ಹೀಗೆ ಎಲ್ಲಾ ತರಹದ ಚಿತ್ರಗಳು ಸಹ ಪ್ರಸಾರವಾಗಿವೆ. ಈ ಪೈಕಿ ಯಾವ ಸ್ಟಾರ್​ ಚಿತ್ರವನ್ನು ಅತೀ ಹೆಚ್ಚು ಜನನ್ನು ನೋಡಿದ್ದಾರೆ ಎಂಬ ಪ್ರಶ್ನೆ ಸಹಜವೇ. ಟಿವಿಯಲ್ಲಿ ಪ್ರಸಾರವಾದ ಚಿತ್ರಗಳ ಪೈಕಿ ಅತೀ ಹೆಚ್ಚು ವೀಕ್ಷಣೆಗೊಳಗಾದ ಚಿತ್ರ ಯಾರದ್ದು ಎಂದರೆ ಅದು ವಿಜಯ್​ ಅವರದ್ದು ಎಂದು ಸಮೀಕ್ಷೆಯೊಂದು ಹೇಳಿದೆ.

    ಲಾಕ್​ಡೌನ್​ ಸಂದರ್ಭದಲ್ಲಿ ಎಲ್ಲಾ ಚಾನಲ್​ಗಳಲ್ಲೂ ಅತೀ ಹೆಚ್ಚು ನೋಡಲ್ಪಟ್ಟ ಚಿತ್ರ ಎಂದರೆ ವಿಜಯ್​ ಅವರದಂತೆ. ಇದು ಬರೀ ತಮಿಳು ಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಇಡೀ ಭಾರತೀಯ ಸಿನಿಮಾದಲ್ಲಿ ಈ ಸಮಯದಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾದ ಸಿನಿಮಾ ಎಂದರೆ, ಅದು ವಿಜಯ್​ ಅವರದ್ದು ಎಂದು ಹೇಳಲಾಗುತ್ತಿದೆ. 117.9 ಮಿಲಿಯನ್​ ಇಂಪ್ರೆಶನ್​ (ಪೂರ್ತಿ ಸಿನಿಮಾ ವೀಕ್ಷಣೆ)ಗಳು ಅವರ ಚಿತ್ರಗಳಿಗೆ ಸಿಕ್ಕಿವೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?

    ಇನ್ನು ಎರಡನೆಯ ಸ್ಥಾನದಲ್ಲಿ ರಾಘವ ಲಾರೆನ್ಸ್​ ಇದ್ದಾರೆ. ರಾಘವ ಅವರ ಚಿತ್ರಕ್ಕೆ 76.2 ಇಂಪ್ರೆಶನ್​ಗಳು ಸಿಕ್ಕಿದ್ದು, ಅವರು ಸಂಖ್ಯೆಯಲ್ಲಿ ರಜನಿಕಾಂತ್​ ಅವರನ್ನು ಹಿಂದಿಕ್ಕಿದೆ. ರಜನಿಕಾಂತ್​ ಅವರ ಚಿತ್ರಗಳು 65.8 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದ್ದು, ಬಾಲಿವುಡ್​ ನಟ ಅಕ್ಷಯ್​ ಕುಮಾರ್​ 58.8 ಮಿಲಿಯನ್​ ಇಂಪ್ರೆಶನ್​ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ತೆಲುಗಿನ ಪ್ರಭಾಸ್​, 56.9 ಮಿಲಿಯನ್​ ವೀಕ್ಷಣೆಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

    ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾಗೆ ಕರೊನಾ ಸೋಂಕು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts