ಐಸ್​ ಕ್ರೀಮ್​​ ಜತೆ ಕಪ್ಪೆ; ಪುಟ್ಟ ಪೋರಿ ಮಾಡಿದ್ದೇನು ನೀವೇ ನೋಡಿ | Viral Video

Untitled design - 2024-11-26T193048.076
Published on

ಚಿಕ್ಕಮಕ್ಕಳು ಮುಗ್ದತೆಯಲ್ಲಿ ಏನೇ ಮಾಡಿದರು ನೋಡಲು ಮುದ್ದಾಗಿ ಇರುತ್ತದೆ. ಅವರು ಮಾಡುವ ಚೇಸ್ಟೆಗಳು ಒಂದೆರಡಲ್ಲ. ಸದ್ಯ ಚಿಕ್ಕ ಹುಡುಗಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗುತ್ತಿದೆ. ಸಾಮಾನ್ಯವಾಗಿ ಮಕ್ಕಳು ಕಪ್ಪೆ ನೋಡಿದರೆ ಹೆದರುತ್ತಾರೆ. ಆದರೆ ವಿಡಿಯೋದಲ್ಲಿ ಹುಡುಗಿಯು ಗೊಂದಲದಲ್ಲಿ ಕಪ್ಪೆಯನ್ನು ಟೇಸ್ಟ್​ ಮಾಡಿದ್ದಾಳೆ. ನೆಟ್ಟಿಗರು ವಿಡಿಯೋ ನೋಡಿ ನಗು ತಡೆಯಲಾಗಲಿಲ್ಲ ಎನ್ನುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಹುಡುಗಿ ಒಂದು ಕೈಯಲ್ಲಿ ಐಸ್​ ಕ್ರೀಮ್​​ ಅನ್ನು ಮತ್ತೊಂದು ಕೈಯಲ್ಲಿ ಕಪ್ಪೆ ಹಿಡಿದಿರುವುದನ್ನು ನೋಡಬಹುದು. ಆಕೆ ಐಸ್​ ಕ್ರೀಮ್​ ಎಂದು ಭಾವಿಸಿ ಐಸ್​ ಕ್ರೀಮ್​ ತಿನ್ನವಂತೆ ಕಪ್ಪೆಯನ್ನು ನೆಕ್ಕುವುದನ್ನು ಕಾಣಬಹುದು. ಬಳಿಕ ಆ ಚಿಕ್ಕ ಹುಡುಗಿಗೆ ಅಸಹ್ಯ ಅನಿಸಿತು. ಕಪ್ಪೆಯ ಮೇಲೆ ಉಗುಳುತ್ತಾಳೆ. ನಂತರ ಮತ್ತೆ ಐಸ್ ಕ್ರೀಮ್ ತಿನ್ನಲು ಪ್ರಾರಂಭಿಸಿದೆ. ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ.

ವಿಡಿಯೋ ವೈರಲ್ ಆದಗಿನಿಂದ ಇಲ್ಲಿಯವರೆಗೂ 43 ಲಕ್ಷ ಮಂದಿ ವೀಕ್ಷಿಸಿದ್ದಾಋಎ. 92 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಹುಡುಗಿಯ ನಡೆ ವಿಚಿತ್ರ ಎನಿಸಿದರೆ, ಇನ್ನು ಕೆಲವರಿಗೆ ಆಕೆಯ ಸ್ಟೈಲ್ ನೋಡಿ ನಗು ತಡೆಯಲಾಗಲಿಲ್ಲ ಎಂದು ಹೇಳಿದ್ದಾರೆ. ಐಸ್​ ಕ್ರೀಮ್​ ಮತ್ತು ಕಪ್ಪೆ ಟಿಪಿಕಲ್​ ಕಾಂಬೋ, ನೀವು ಕಪ್ಪೆಯನ್ನು ಟೇಸ್ಟ್​ ಮಾಡಿದ್ದೀರಾ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net