

ಲಖನೌ: ನೀರಿನಲ್ಲಿ ವಾಸಿಸುವ ಪರಭಕ್ಷಕ ಮೊಸಳೆ ಅಪಾಯಕಾರಿ ಪ್ರಾಣಿ ಎಂದರೆ ತಪ್ಪಲ್ಲ. ಮೊಸಳೆ ತನ್ನ ಹೊಟ್ಟೆಯನ್ನು ತುಂಬಲು ಯಾವಾಗಲೂ ಬೇಟೆಯ ಹುಡುಕಾಟದಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅದರ ತೂಕ ಹೆಚ್ಚಾಗುವುದು ಸಹಜ. ನೀರಿನಿಂದ ಹೊರಬಂದು ಜನರಿಗೆ ತೊಂದರೆ ಕೊಡುವ ಮೊಸಳೆಯನ್ನು ರಕ್ಷಣಾ ತಂಡವು ಆಗಾಗ್ಗೆ ಅದನ್ನು ವಾಹನದಲ್ಲಿ ತೆಗೆದುಕೊಂಡು ನೀರಿಗೆ ಬಿಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಅದರಲ್ಲಿ ವ್ಯ್ಕತಿಯೊಬ್ಬರು ಮೊಸಳೆಯನ್ನು ಹೊತ್ತೊಯ್ಯುತ್ತಿದ್ದಾರೆ. ಈ ವಿಡಿಯೋ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯದ್ದು ಎನ್ನಲಾಗಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆಯನ್ನು ಭುಜದ ಮೇಲೆ ಹೊತ್ತುಕೊಂಡಿದ್ದಾನೆ. ಹೆಗಲ ಮೇಲಿರುವ ಮೊಸಳೆಯ ಬಾಯಿ ಮತ್ತು ಕೈಗಳನ್ನು ಕಟ್ಟಿರುವುದನ್ನು ನೋಡಬಹುದು. ಇದರಿಂದ ಪ್ರಜ್ಞೆ ತಪ್ಪಿದ ಮೊಸಳೆಯು ಪ್ರಜ್ಞೆ ಮರಳಿದ ನಂತರ ವ್ಯಕ್ತಿಯ ಮೇಲೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ.
ಕಳೆದ ಮೂರು ವಾರಗಳಿಂದ ಹಮೀರ್ಪುರದಲ್ಲಿ ಮೊಸಳೆ ಭಯವನ್ನು ಹರಡಿತ್ತು. ಆದ್ದರಿಂದ ಅರಣ್ಯ ಇಲಾಖೆ ತಂಡ ಕ್ರಮಕೈಗೊಂಡಿದ್ದಾರೆ. ಆದರೆ ಅರಣ್ಯ ಇಲಾಖೆ ನೌಕರರಿಗೆ ಮೊಸಳೆ ಹಿಡಿಯುವುದು ವಿಶೇಷವೇನಲ್ಲ ಅದನ್ನು ಸುಲಭವಾಗಿ ಹಿಡಿಯಬಹುದು. ಆದರೆ ಯಾರಾದರೂ ಮೊಸಳೆಯನ್ನು ಭುಜದ ಮೇಲೆ ಹೊತ್ತೊಯ್ಯುತ್ತಾರೆಯೇ. ಆದ್ದರಿಂದಲೇ ಈ ವಿಡಿಯೋ ಒಂದು ವಿಸ್ಮಯದಂತೆ ತೋರುತ್ತದೆ.
13 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಅದರಲ್ಲಿ ಕೆಲವರು ಮೊಸಳೆಯನ್ನು ಹೊತ್ತ ವ್ಯಕ್ತಿಗೆ ಶೌರ್ಯ ಪದಕವನ್ನು ನೀಡುವಂತೆ ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)