

ದುಬೈ: ಪ್ರಪಂಚದಲ್ಲಿ ಒಂದೊಂದು ವಸ್ತುವಿಗೆ ಒಂದೊಂದು ಬೆಲೆ ಇರುತ್ತದೆ. ಯಾವ ವಸ್ತುವಿಗೆ ಎಷ್ಟು ಬೆಲೆ ಕೊಡಬಹುದು ಎಂದು ಜನರು ಸುಲಭವಾಗು ಊಹಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿನ ಮಾಹಿತಿಯು ಚಹಾ ಪ್ರಿಯರ ಹುಬ್ಬೆರುವಂತೆ ಮಾಡಿದೆ. ಹೌದು ದುಬೈನ(Dubai) ಕೆಫೆಯೊಂದರಲ್ಲಿನ ಚಹಾದ ಮೊತ್ತ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋದಲ್ಲಿ ಬೋಹೊ ಕೆಫೆ ಮತ್ತು ರೆಸ್ಟೋರೆಂಟ್ ನೀವು ವಿಶ್ವದ ಅತ್ಯಂತ ಐಷಾರಾಮಿ ಬೆಲೆಯ ಚಹಾವನ್ನು ಕುಡಿಯಬಹುದಾದ ಏಕೈಕ ಸ್ಥಳವಾಗಿದೆ ಎಂದು ವಿವರಿಸುತ್ತಾರೆ. ಈ ಚಹಾವನ್ನು ಬಡಿಸಲು, ಬೆಳ್ಳಿಯಿಂದ ಮಾಡಿದ ತಟ್ಟೆಗಳು ಮತ್ತು ಕಪ್ಗಳನ್ನು ಬಳಸಲಾಗುತ್ತದೆ. ಕಪ್ನಲ್ಲಿ ಬರುವ ಚಹಾವನ್ನು 24-ಕ್ಯಾರಟ್ ಚಿನ್ನದ ಹಾಳೆಯಿಂದ ಮುಚ್ಚಲಾಗುತ್ತದೆ. ಈ ಚಹಾದೊಂದಿಗೆ ನೀವು ಚಿನ್ನದ ಧೂಳಿನ ಕ್ರೋಸೆಂಟ್ ಅನ್ನು ಸಹ ತಿನ್ನಬಹುದು. ಈ ಕೆಫೆಯಲ್ಲಿ ಚಿನ್ನದ ಚಹಾದ ಬೆಲೆ 1 ಲಕ್ಷ ರೂಪಾಯಿ ಎಂದು ತೋರಿಸುವುದನ್ನು ನೀವು ನೋಡಬಹುದು.
ಈ ಕೆಫೆಯಲ್ಲಿ ಚಹಾ ಕುಡಿಯುವ ವಿಶೇಷತೆಯೆಂದರೆ ಚಹಾದೊಂದಿಗೆ ಬರುವ ಬೆಳ್ಳಿಯ ಕಪ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ನಿಮಗೆ ಚಹಾ ಇಷ್ಟವಿಲ್ಲದಿದ್ದರೆ ನೀವು ಅದೇ ದರದಲ್ಲಿ ಇತರ ಕಾಫಿಗಳನ್ನು ಆರ್ಡರ್ ಮಾಡಬಹುದು ಎಂದು ಹೇಳುತ್ತಾರೆ. ಬೋಹೊ ಕೆಫೆಯ 'ಗೋಲ್ಡ್ ಕ್ಯಾರೆಟ್’ ಚಹಾವು ಭಾರತೀಯ ಮೂಲದ ಸುಚೇತಾ ಶರ್ಮಾ ಅವರ ಮೆದುಳಿನ ಕೂಸು. DIFCನಲ್ಲಿರುವ ಎಮಿರೇಟ್ಸ್ ಫೈನಾನ್ಶಿಯಲ್ ಟವರ್ಸ್ನಲ್ಲಿ ಕೆಫೆಯನ್ನು ಅಕ್ಟೋಬರ್ 2024ರಲ್ಲಿ ತೆರೆಯಲಾಯಿತು. ಈ ಕೆಫೆಯ ಐಷಾರಾಮಿಯು ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಕೆಫೆಯಲ್ಲಿ ದೊರೆಯುವ ಚಿನ್ನದ ಲೇಪಿತ ಕ್ರೋಸೆಂಟ್ಸ್ ಮತ್ತು ಗೋಲ್ಡ್ ಲೀಫ್ ಟೀ ಈ ರೆಸ್ಟೋರೆಂಟ್ನ ವಿಶೇಷ ಆಕರ್ಷಣೆಗಳಾಗಿವೆ.
1 ಲಕ್ಷ ರೂಪಾಯಿ ಮೌಲ್ಯದ ಚಹಾದ ಈ ವೀಡಿಯೋಗೆ ನೆಟ್ಟಿಗರು ದಂಗಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅಣ್ಣ ನೀವು ಚಹಾ ಕುಡಿಯಲು EMI ತೆಗೆದುಕೊಳ್ಳಬೇಕಾಗುತ್ತದೆ, ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ, ಇದು ನಿಜವಾಗಿಯೂ ತುಂಬಾ ಐಷಾರಾಮಿಯಾಗಿ ಕಾಣುತ್ತದೆ, 1 ಲಕ್ಷ ರೂಪಾಯಿ ಟೀ ಕುಡಿಯುತ್ತಿದ್ದಾರೆ, ಅವರು ತಮ್ಮ ಹಣವನ್ನು ಸ್ಪಷ್ಟವಾಗಿ ಪರಿಗಣಿಸುವುದಿಲ್ಲ, ಇದು ಹಣದ ವ್ಯರ್ಥ, ನಮ್ಮ ದೇಶದಲ್ಲಿ 10 ರೂಪಾಯಿಗೆ ಸಿಗುವ ಟ್ಯಾಪ್ರಿ ಟೀ ನಮಗೆ ಖುಷಿ ತಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)