ದುಬೈ: ಮದುವೆಯ ನಂತರ ಜೀವನದಲ್ಲಿ ಅನೇಕ ಬದಲಾವಣೆಗಳು ಬರುತ್ತವೆ. ಪರಸ್ಪರ ಒಪ್ಪಿಗೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಸಂಸಾರದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಷರತ್ತುಗಳನ್ನು ವಿಧಿಸಿದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. ಸದ್ಯ ಸಾಮಾಜಿಕ ಜಾಲತಾಣಲದ್ಲಿ ವಿಡಿಯೋವೊಂದು ವೈರಲ್(VIdeo Viral) ಆಗುತ್ತಿದೆ. ಆ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಗಂಡನ ಹಾಕಿರುವ ಕಠಿಣ ನಿಯಮಗಳನ್ನು ಬಹಿರಂಗಪಡಿಸಿದ್ದಾರೆ. ದುಬೈ ಮಹಿಳೆಯ ವಿಡಿಯೋಗೆ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಆ ಮಹಿಳೆಯ ಹೆಸರು ಮಹಿಳೆಯ ಹೆಸರು ಸೌದಿ ಅಲ್ ನಡಕ್.

ಇದನ್ನು ಓದಿ: ವಡಾಪಾವ್ ತಿಂದು ವಾವ್.. ಎಂದ ಕೊರಿಯನ್ ಹುಡುಗಿ; Viral Video ನೋಡಿ ಹಿಗ್ಗಿದ ನೆಟ್ಟಿಗರು
ಸೌದಿ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಐಷಾರಾಮಿ ಜೀವನಶೈಲಿಯ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಆಕೆ ದುಬೈನಲ್ಲಿರುವ ನನ್ನ ಮಿಲಿಯನೇರ್ ಪತಿ ನನಗೆ ಕಠಿಣ ನಿಯಮಗಳನ್ನು ಮಾಡಿದ್ದಾರೆ ಎಂದು ಬರೆದುಕೊಂಡು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಮಹಿಳೆ ತನ್ನ ಪತಿಯ ಆಯ್ಕೆಯ ಬಗ್ಗೆಯೂ ಹೇಳುತ್ತಾ, ಬ್ಯಾಗ್‌ಗಳು ಯಾವಾಗಲೂ ಶೂ/ಸ್ಯಾಂಡಲ್‌ಗಳಿಗೆ ಹೊಂದಿಕೆಯಾಗವುಂತಿರಬೇಕು, ಅದನ್ನು ನನ್ನ ಪತಿ ಇಷ್ಟಪಡುತ್ತಾರೆ. ಮತ್ತು ನನಗೆ ಕೆಲಸ ಮಾಡಲು ಅವಕಾಶ ಇಲ್ಲ, ಏಕೆಂದರೆ ಎಲ್ಲಾ ಖರ್ಚು-ವೆಚ್ಚವನ್ನು ಪತಿಯೇ ಭರಿಸುತ್ತಾರೆ ಎಂದು ಕಾರಣ ಹೇಳಿದ್ದಾಳೆ. ಆಕೆ ಮನೆಯಲ್ಲಿ ಅಡುಗೆ ಕೂಡ ಮಾಡುವುದಿಲ್ಲವಂತೆ. ಗಂಡ ಹೆಂಡತಿ ಇಬ್ಬರೂ ಹೊರಗೆ ಊಟ ಮಾಡುವತ್ತಾರೆ ಎಂದು ಹೇಳಿದ್ದಾರೆ.
ಆಕೆಯ ಪತಿ ಪುರುಷರೊಂದಿಗೆ ಸ್ನೇಹ ಬೆಳೆಸಬೇಡಿ ಎಂದು ಸಲಹೆ ನೀಡಿದ್ದಾರೆ. ಇಬ್ಬರಿಗೂ ಪರಸ್ಪರರ ಪಾಸ್‌ವರ್ಡ್‌ಗಳು ಗೊತ್ತು ಎಂದು ತಿಳಿಸಿದ್ದಾಳೆ. ಅಲ್ಲದೆ ಪ್ರತಿದಿನ ವೃತ್ತಿಗೆ ಹೋಗುವಂತೆ ನಾನು ಹೇರ್ಸ್ಟೈಲ್ ಮತ್ತು ಮೇಕಪ್ ಮಾಡಿಕೊಂಡು ರೆಡಿಯಾಗಬೇಕೆಂದು ನನ್ನ ಪತಿ ನಿರೀಕ್ಷಿಸುತ್ತಾರೆ ಎಂದು ತಿಳಿಸಿದ್ದಾಳೆ.
ಈ ವಿಡಿಯೋವನ್ನು ಇದುವರೆಗೂ 50 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ, ಹಣವಿಲ್ಲದೆ ಸಂತೋಷವಾಗಿರುವುದು ಉತ್ತಮ, ಪತಿ ಕಂಟ್ರೋಲ್ ಮಾಡಲು ಬಯಸುತ್ತಿದ್ದಾನೆ, ಈ ಮಿಲಿಯನೇರ್ ಪತಿ ನಿಮ್ಮ ಸಂತೋಷ ಮತ್ತು ಸಂತೃಪ್ತ ಜೀವನವನ್ನು ಬಯಸುವುದಿಲ್ಲ, ನಿಮಗೆ ಯೋಚಿಸಲು ಮತ್ತು ಅಭಿಪ್ರಾಯಗಳನ್ನು ಹೊಂದಲು, ಅದನ್ನೂ ಸಾರ್ವಜನಿಕವಾಗಿ ಅಥವಾ ಎಲ್ಲಿಯಾದರೂ ವ್ಯಕ್ತಪಡಿಸಲು ಅನುಮತಿಸಲಾಗಿದೆಯೇ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)
ಮಧ್ಯರಾತ್ರಿ ಮನೆಗೆ ಬಂದ ಅತಿಥಿ; ಸಿಂಹದ ಎಂಟ್ರಿ Video ನೋಡಿ ನೆಟ್ಟಿಗರು ಶಾಕ್ | Viral Video