More

    ಈ ವಿಡಿಯೋ ನೋಡಿ ತಲೆಗೆ ಹುಳ ಬಿಟ್ಕೋಬೇಡಿ: ವಿಚಿತ್ರ ಜೀವಿ ನೋಡಿ ತಲೆ ಕೆರೆದುಕೊಂಡು ಏನಿದು ಅಂತಿದ್ದಾರೆ ಕೆಲವರು!

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ನೆಟ್ಟಿಗರ ತಲೆಗೆ ಹುಳಬಿಟ್ಟಿದೆ. ಇಂದು ಬೆಳಗ್ಗೆಯಷ್ಟೇ ಭಾರತೀಯ ಅರಣ್ಯಾಧಿಕಾರಿ ಪರ್ವೀನ್​ ಕಾಸ್ವಾನ್​, ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿರುವ ಜೀವಿ ಯಾವುದೆಂಬುದು ನಟ್ಟಿಗರಿಗೆ ಯಕ್ಷ ಪ್ರಶ್ನೆಯಾಗಿದೆ.

    ವಿಡಿಯೋದಲ್ಲಿ ಏನಿದೆ?: ವಿಚಿತ್ರವಾಗಿ ಕಾಣುವ ಜೀವಿಯೊಂದು ನಿಧಾನವಾಗಿ ಮರವನ್ನು ಏರುವ ದೃಶ್ಯವನ್ನು ಕಾಣಬಹುದಾಗಿದೆ. ಆದರೆ, ವಿಡಿಯೋ ನೋಡಿದವರು ಒಮ್ಮೆ ತಲೆಗೆ ಕೈಹಾಕಿ ಕೆರೆದುಕೊಂಡು, ಇದ್ಯಾವ ಜೀವಿಯಪ್ಪಾ ಎನ್ನುವಂತಿದೆ.

    ವಿಡಿಯೋ ಕುರಿತು ಬರೆದುಕೊಂಡಿರುವ ಪರ್ವೀನ್​ ಕಾಸ್ವಾನ್​, ಪ್ರಕೃತಿಯ ಪ್ರತಿಯೊಂದು ವಿವರವು ನಿಖರತೆಯಿಂದ ಕೂಡಿದೆ. ಆದರೆ, ಆ ವಿವರವನ್ನು ಅನೇಕ ಬಾರಿ ನಾವು ಗಮನಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಈ ವಿಡಿಯೋವನ್ನು ಮರಿಯಾ ಛಾಕೊನ್​ ಎಂಬುವರು ಸೆರೆಹಿಡಿದಿದ್ದಾರೆ. ನನ್ನನ್ನು ನಂಬಿ ನೀವು ಈವರೆಗೂ ಇಂತಹ ಜೀವಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ.

    44 ಸೆಕೆಂಡಿನ ವಿಡಿಯೋವನ್ನು ಕೇವಲ 3 ಗಂಟೆಯ ಅವಧಿಯಲ್ಲೇ 6 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದವರು ತುಂಬಾ ಕುತೂಹಲದಿಂದ ಕಾಮೆಂಟ್​ ಮಾಡಿದ್ದು, ಈ ಜೀವಿಯನ್ನು ಏನೆಂದು ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಕಡ್ಡಿ ಮತ್ತು ಎಲೆ ಕೀಟದೊಂದಿಗೆ ಈ ಕೀಟವನ್ನು ಹೋಲಿಸಿ ನೋಡಿದರೆ, ಅದರ ಚಲನೆಯ ಬಗ್ಗೆ ಯಾವುದೇ ಐಡಿಯಾ ಹೊಳೆಯುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಕೇಳಿದರೆ, ಇಂತಹ ಜೀವಿಯನ್ನೇ ನೋಡಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್​)

    VIDEO| ರಜಿನಿ, ಕಮಲ್​ರಿಂದ ಹಿಡಿದು ಬೇಬಿ ಶಾಲಿನಿ ಸೇರಿ 4 ನಿಮಿಷದಲ್ಲಿ 51 ಧ್ವನಿ ಮಿಮಿಕ್ರಿ ಮಾಡುವ ಕೇರಳ ಯುವತಿಗೆ ಎಲ್ರೂ ಫಿದಾ!

    VIDEO| ಟಿಕ್​ಟಾಕ್​ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿರುವ ಅಜ್ಜಿ-ಮೊಮ್ಮಗನ ಭಾವನಾತ್ಮಕ ಕತೆ ಇದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts