

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದ ಅಟಲ್ ಟನಲ್ನ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಟಲ್ ಟನಲ್ ಹಿನ್ನೆಲೆ, ಅದನ್ನು ನಿರ್ಮಿಸುವಾಗ ಎದುರಿಸಿದ ಸವಾಲುಗಳು, ಎಷ್ಟು ಜನ ಅದರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನೂ ನೀಡಲಾಗಿದೆ.
ಮೂರು ನಿಮಿಷ ಹದಿಮೂರು ಸೆಕೆಂಡ್ನ ವಿಡಿಯೋವನ್ನು ಟ್ವಿಟರ್ಗೆ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ 1,600ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ. 243 ಜನ ಪ್ರತಿಕ್ರಿಯಿಸಿದ್ದಾರೆ. 7,200ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇದೇ ವಿಡಿಯೋ ಯೂಟ್ಯೂಬ್ನಲ್ಲೂ ಅಪ್ಲೋಡ್ ಆಗಿದ್ದು, 20ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಹೊಂದಿದೆ.