More

    VIDEO| ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗ ಮಾರ್ಗದ ವಿಶೇಷತೆಗಳು ಹೀಗಿವೆ..!

    ಮನಾಲಿ: ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು (ಅ. 3 ಶನಿವಾರ) ಲೋಕಾರ್ಪಣೆಗೊಳಿಸಿದರು.

    ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ಅಟಲ್​ ಸುರಂಗ ಮಾರ್ಗದ ಪ್ರಮುಖ 10 ಆಸಕ್ತಿಕರ ಸಂಗತಿಗಳು ಈ ಕೆಳಕಂಡಂತಿವೆ….

    1. ಅಟಲ್​ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000, ಜೂನ್​ 3ರಂದು ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002, ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು.
    2. 2019, ಡಿಸೆಂಬರ್​ 25ರಂದು ರೋಹ್ಟಾಂಗ್​ ಸುರಂಗ ಮಾರ್ಗವನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ “ಅಟಲ್​​ ಸುರಂಗ” ಎಂದು ಮರುನಾಮಕರಣ ಮಾಡಲಾಯಿತು.
    3. ಅಲಟ್​​ ಸುರಂಗವೂ ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ. ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಸುರಂಗವನ್ನು ನಿರ್ಮಿಸಲಾಗಿದೆ.
    4. ಸುರಂಗವೂ ಸುಮಾರು 9.02 ಕಿ.ಮೀ ಉದ್ದವಿದೆ. ಅಲ್ಟ್ರಾ-ಮಾಡರ್ನ್​ ವಿಶೇಷತೆಗಳಿಂದ ಹಿಮಾಲಯದ ಪಿರ್​ ಪಂಜಲ್​ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.
    5. ವಿಶ್ವದಲ್ಲೇ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಖ್ಯಾತಿಗೆ ಅಟಲ್​ ಸುರಂಗ ಮಾರ್ಗ ಭಾಜನವಾಗಿದ್ದು, ಇದು ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದ್ದು, ಪ್ರಯಾಣದ ದೂರ 4 ರಿಂದ 5 ಗಂಟೆ ತೆಗೆದುಕೊಳ್ಳಲಿದೆ.
    6. ಸುರಂಗವೂ ಕುದರೆ ಲಾಳದ ಆಕಾರದಲ್ಲಿದೆ. ಸಿಂಗಲ್​ ಟ್ಯೂಬ್ ಡಬಲ್ ಲೇನ್ ಸುರಂಗವು 8 ಮೀಟರ್ ರಸ್ತೆಮಾರ್ಗವನ್ನು ಹೊಂದಿದೆ ಮತ್ತು 5.525 ಮೀಟರ್ ಓವರ್​ ಹೆಡ್​ ಕ್ಲಿಯರೆನ್ಸ್ ಹೊಂದಿದೆ.
    7. ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ದಿನಕ್ಕೆ 3,000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
    8. ಸುರಂಗವೂ 10.5 ಮೀಟರ್​ ಅಗಲವಿದೆ ಮತ್ತು 3.6 X 2.25 ಮೀಟರ್​ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿಯೇ ನಿರ್ಮಿಸಲಾಗಿದೆ.
    9. ಸಿಸಿಟಿವಿ ಕ್ಯಾಮೆರಾ, ಯಾವುದೇ ತುರ್ತು ಪರಿಸ್ಥಿತಿಗಾಗಿ ಪ್ರತಿ 150 ಮೀಟರ್​ಗೆ ಟೆಲಿಫೋನ್ ಸಂಪರ್ಕ, ಪ್ರತಿ 60 ಮೀಟರ್​ಗೆ ಅಗ್ನಿಶಾಮಕ ಯಾಂತ್ರಿಕ ವ್ಯವಸ್ಥೆ ಮತ್ತು ಸ್ವಯಂ ಘಟನೆ ಪತ್ತೆ ವ್ಯವಸ್ಥೆ ಸೇರಿದಂತೆ ಸುರಂಗದಲ್ಲಿ ವಿವಿಧ ರೀತಿಯ ಭದ್ರತಾ ಸಾಧನಗಳಿವೆ.
    10. ಪ್ರತಿ 25 ಮೀಟರ್‌ನಲ್ಲಿ ಸ್ಥಳಾಂತರಿಸುವ ದೀಪಗಳು ಮತ್ತು ನಿರ್ಗಮನ ಚಿಹ್ನೆಗಳು ಮತ್ತು ವಿಸ್ತರಣಾ ವ್ಯವಸ್ಥೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts