VIDEO| ಭಾರತಕ್ಕೆ ಮತ್ತೊಂದು ಬೆಳ್ಳಿ! ದಾಖಲೆ ಎತ್ತರ ಜಿಗಿದ ನಿಶದ್​ ಕುಮಾರ್

nishad
Published on

ಟೋಕಿಯೋ: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಇಂದು ಮತ್ತೊಂದು ರಜತ ಪದಕ ಭಾರತದ ಪಾಲಾಗಿದೆ. ಅಥ್ಲೀಟ್​ ನಿಶದ್​ ಕುಮಾರ್​​ ಹೈ ಜಂಪ್​​ನಲ್ಲಿ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ತಲೆಯೊಡ್ಡಿದ್ದಾರೆ.

ಹೈಜಂಪ್​ ಟಿ47 ಸ್ಪರ್ಧೆಯಲ್ಲಿ 2.06 ಮೀಟರ್​ ಎತ್ತರ ಜಿಗಿಯುವಲ್ಲಿ ಯಶಸ್ವಿಯಾದ ನಿಶದ್ ಕುಮಾರ್​,​ ಏಷಿಯಾ ಮಟ್ಟದ ದಾಖಲೆಯನ್ನೂ ರಚಿಸಿದ್ದಾರೆ. ಒಂದೇ ದಿನದಲ್ಲಿ ಭಾರತದ ಇಬ್ಬರು ಕ್ರೀಡಾಪಟುಗಳು ಪದಕದ ಸವಿಯುಣಿಸಿದ್ದಾರೆ. ಇಂದು ಬೆಳಿಗ್ಗೆ ಟೇಬಲ್​ ಟೆನಿಸ್​ನಲ್ಲಿ ಭಾರತದ ಪ್ರಪ್ರಥಮ ಬೆಳ್ಳಿ ಪದಕವನ್ನು ಭವೀನಾಬೇನ್​ ಪಟೇಲ್ ಜಯಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net