

ಅಮರಾವತಿ: ಬಂಗಾಳಕೊಲ್ಲಿಯಲ್ಲಿ (Bay Of Bengal) ವಾಯುಭಾರ ಕುಸಿತ ಉಂಟಾಗಿ ಆಂಧ್ರಪ್ರದೇಶದಲ್ಲಿ (AndhraPradesh) ಭಾರೀ ಮಳೆಯಾಗುತ್ತಿದ್ದು (Heavy Rains), ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯ (Heavy Rains) ನಡುವೆಯೇ ಕುಟುಂಬವೊಂದು ಕಾಲುವೆ (canal) ದಾಟಿ ಅಂತ್ಯಸಂಸ್ಕಾರ (Funeral) ನೆರವೇರಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು (Chittoor) ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರಿನ ಕಸ್ತೂರಿ ನಾಯುಡು ಕಂಡ್ರಿಗಾ ಮೂಲದ ಶಂಕರ್ (55) ಎಂಬುವವರು ಮಂಗಳವಾರ (ಅಕ್ಟೋಬರ್ 16) ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರು ಶವವನ್ನು (Corpse) ಹೊತ್ತು ಕಾಲುವೆಯನ್ನು (canal) ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಶವವನ್ನು ಹೆಗಲ ಮೇಲೆ ಹೊತ್ತಿರುವ ನಾಲ್ವರು ವ್ಯಕ್ತಿಗಳು ಮುಂದೆ ಕಾಲುವೆಯಲ್ಲಿ (canal) ಸಾಗುತ್ತಿರುವ ಇಬ್ಬರು ವ್ಯಕ್ತಿಗಳ ನಿರ್ದೇಶನ (Direction) ನೀಡಿದಂತೆ ಸಾಗುತ್ತಿದ್ದಾರೆ. ಶವದ ಹಿಂಭಾಗ ವ್ಯಕ್ತಿಯೋರ್ವ ಮಣ್ಣಿನ ಮಡಿಕೆ ಹಿಡಿದಿದ್ದು, ಮುಂಬದಿ ಇರುವವರು ನೋಡಿಕೊಂಡು ಕಾಲುವೆಯನ್ನು (canal) ದಾಟುತ್ತಿದ್ದಾನೆ. ಈ ವಿಡಿಯೋ ವೈರಲ್ (Video Viral) ಆಗಿದೆ.
ಇತ್ತ ತಮ್ಮೂರಿನ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ (Funeral) ಕಾಲುವೆ (canal) ದಾಟಬೇಕಾದ ಪರಿಸ್ಥಿತಿ ಎದುರಾಗಿದ್ದನ್ನು ಖಂಡಿಸಿರುವ ಗ್ರಾಮಸ್ಥರು (Villagers) ಕಾಲುವೆಗೆ ಅಡ್ಡಲಾಗಿ ಸೇತುವೆ (Bridge) ಒಂದನ್ನು ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಲು ಸರ್ಕಾರ ಹಾಗೂ ಸ್ಥಳೀಯಾಡಳಿತ ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶ (AndhraPradesh) ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (APSDMA) ಪಶ್ಚಿಮ ಗೋದಾವರಿ, ಎಲೂರು, ಕೃಷ್ಣ ಮತ್ತು ಎನ್‌ಟಿಆರ್, ಗುಂಟೂರು, ಬಾಪಟ್ಲ, ಪಲ್ನಾಡು, ಪ್ರಕಾಶಂ, ನೆಲ್ಲೂರು, ನಂದ್ಯಾಲ, ಅನ್ನಮಯ್ಯ, ಚಿತ್ತೂರು, ತಿರುಪತಿ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.