VIDEO| ಮೂತ್ರ ಬೆರೆಸಿ ಅಡುಗೆ ಮಾಡುವ ವೇಳೆ ಸಿಕ್ಕಿಬಿದ್ದ House Maid; ಬಳಿಕ ಆಕೆ ನೀಡಿದ ಕಾರಣ ಕೇಳಿ ಎಲ್ಲರೂ ಶಾಕ್​

Viral Video
Published on

ಲಖನೌ: ತಾವಿಲ್ಲದಿದ್ದರೂ ಮನೆ ಕೆಲಸವನ್ನು (Maid) ಅಚ್ಚುಕಟ್ಟಾಗಿ ಮಾಡಿ ಏನೇ ಸಮಸ್ಯೆಯಿದ್ದರೂ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಮೇಲೆ ನಾವು ಮನೆ ಕೆಲಸದವರನ್ನು ನೇಮಿಸಿಕೊಳ್ಳುತ್ತೇವೆ. ಅವರನ್ನು ನಮ್ಮ ಕುಟುಂಬದಲ್ಲಿ (family) ಒಬ್ಬರನ್ನಾಗಿಸುತ್ತೇವೆ. ಆದರೆ, ಕೆಲವರು ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶ (UttarPradesh) ಗಾಜಿಯಾಬಾದ್​ನಲ್ಲಿ ನಡೆದಿದ್ದು, ಆಘಾತಕಾರಿ ವಿಡಿಯೋ (Shocking Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಗಾಜಿಯಾಬಾದ್​ನ (Ghaziabad) ಥಾನಾ ಕ್ರಾಸಿಂಗ್​ ರಿಪಬ್ಲಿಕ್​ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮನೆ ಕೆಲಸದಾಕೆ ತನ್ನ ಮಾಲೀಕರಿಗೆ ನೀಡುವ ಆಹಾರದಲ್ಲಿ ಮೂತ್ರ ಬೆರೆಸಿ ಕೊಟ್ಟಿದ್ದು, ಈಕೆಯ ದುಷ್ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್​ ಆಗಿದ್ದು, ಕೆಲಸದಾಕೆ (House Maid) ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗಾಜಿಯಾಬಾದ್​ (Ghaziabad) ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೀನಾ (House Maid) ಎಂಬಾಕೆ ಈ ಕೃತ್ಯ ಎಸಗಿದ್ದು, ಸದ್ಯ ಆಕೆಯನ್ನು ಬಂಧಿಸಲಾಗಿದೆ. ಉದ್ಯಮಿಯ ಕುಟುಂಬದವರು ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮನೆ ಕೆಲಸದಾಕೆ (House Maid) ಮೇಲೆ ಅನುಮಾನಗೊಂಡು ಅಡುಗೆ ಮನೆಯಲ್ಲಿ ಕ್ಯಾಮರಾವನ್ನು ಇರಿಸಿದ್ದು, ಈ ವೇಳೆ ಕೆಲಸದಾಕೆ ರೀನಾ (House Maid) ಹಿಟ್ಟಿನಲ್ಲಿ ಮೂತ್ರ (Urine) ಬೆರೆಸಿ ಅದರಲ್ಲಿ ಆಹಾರ ತಯಾರಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಮನೆಯವರು ಮನೆಕೆಲಸದಾಕೆಯ (House Maid) ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ ಆಧಾರದ ಮೇರೆಗೆ ಆಕೆಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.

ಮನೆ ಕೆಲಸದಾಕೆ ಹೇಳಿದ್ದಿಷ್ಟು?

ಮನೆಯೊಡತಿ ಸದಾ ನನ್ನ ಮೇಲೆ ಕಣ್ಣಿಡುತ್ತಿದ್ದಳು. ಸಣ್ಣ ಸಣ್ಣ ತಪ್ಪಿಗೂ ಒಡತಿ ಬೈಯ್ಯುತ್ತಿದ್ದಳು. ಹೀಗಾಗಿ ಆಕೆಯ ಮೇಲಿನ ಸಿಟ್ಟಿನಿಂದಾಗಿ ಈ ರೀತಿ ಮಾಡಿದೆ ಎಂದು ಮನೆ ಕೆಲಸದಾಕೆ (House Maid) ರೀನಾ ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ಸಚಿನ್ ಗುಪ್ತಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ವಿಡಿಯೋವನ್ನ ನೋಡಿರುವ ನೆಟ್ಟಿಗರು ಪರ-ವಿರೋಧದ ಕಮೆಂಟ್​ ಹಾಕುತ್ತಿದ್ದಾರೆ. ಈ ಮಹಿಳೆ ನಿಜಕ್ಕೂ ಅಸಹ್ಯಕರ ಕೃತ್ಯವನ್ನೇ ಮಾಡಿದ್ದಾಳೆ. ಆದರೆ ಈಕೆಯ ಈ ಮನಸ್ಥಿತಿಗೆ ಮಾಲೀಕರ ಕೆಟ್ಟ ನಡವಳಿಕೆ ಏನಾದರೂ ಕಾರಣವಿರಬಹುದೇ ಎಂದು ಕಮೆಂಟ್​ ಹಾಕಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net