VIDEO| ಬರ್ತ್​ಡೇ ಪಾರ್ಟಿಗೆ ಟ್ರ್ಯಾಕ್ಟರ್​ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪೋರಿ!

tractor
Published on

ಬ್ರೆಸಿಲಿಯ: ಜನ್ಮದಿನ, ಮದುವೆ ಮುಂತಾದ ಸಂದರ್ಭಗಳನ್ನು ಅದ್ಧೂರಿಯಾಗಿ ಅಷ್ಟೇ ಅಲ್ಲ ವಿಭಿನ್ನವಾಗಿ ಆಚರಿಸಿಕೊಳ್ಳಬೇಕು ಎಂಬ ಬಯಕೆ ಬಹುತೇಕ ಜನರಲ್ಲಿರುತ್ತದೆ. ಇಂಥದ್ದೇ ಒಂದು ಬಯಕೆಯನ್ನು ಬ್ರೆಜಿಲ್​ನ ಬಾಲಕಿಯೊಬ್ಬಳು ಪೂರೈಸಿಕೊಂಡಿದ್ದಾಳೆ. ಅದಕ್ಕಾಗಿ ಭಾರತದಲ್ಲಷ್ಟೇ ಅಲ್ಲ, ವಿವಿಧ ರಾಷ್ಟ್ರಗಳಲ್ಲಿ ಬಳಕೆದಾರರನ್ನು ಹೊಂದಿರುವ ಮಹೀಂದ್ರ ಕಂಪೆನಿಯ ಟ್ರ್ಯಾಕ್ಟರನ್ನು ಬಳಸಿದ್ದಾಳೆ.

ಮಹೀಂದ್ರ ಗ್ರೂಪ್​ನ ಚೇರ್​ಮನ್​ ಆನಂದ ಮಹೀಂದ್ರ ಈ ಬಗ್ಗೆ ಟ್ವೀಟ್​ ಮಾಡಿದ್ದು, ಬಾಲಕಿಯೊಬ್ಬಳು ತನ್ನ ಹುಟ್ಟಿದಹಬ್ಬದ ಪಾರ್ಟಿಗೆ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಎಂಟ್ರಿ ಕೊಟ್ಟಿರುವ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಕಂಪೆನಿಯ ಬ್ರೆಜಿಲ್​ ಗ್ರಾಹಕರೊಬ್ಬರ ಮಗಳಿಗೆ ಟ್ರ್ಯಾಕ್ಟರ್​ಗಳೆಂದರೆ ಪ್ರೀತಿ! ಆದ್ದರಿಂದ ಬ್ರೆಜಿಲ್​ ಸಂಸ್ಕೃತಿಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಭಾವಿಸಲಾಗುವ 15ನೇ ವರ್ಷದ ಜನ್ಮದಿನಕ್ಕೆ ತಮ್ಮ ಬ್ರಾಂಡ್​ನ ಪುಟ್ಟ ಟ್ರ್ಯಾಕ್ಟರ್​ಅನ್ನು ವಿತರಕರಿಂದ ಪಡೆದುಕೊಂಡಿದ್ದರೆಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net