ಕತ್ರೀನಾ - ವಿಕಿ ವಿವಾಹಕ್ಕೆ ಸರ್ಕಾರಿ ಮೊಹರು? ಮುಂಬೈನಲ್ಲಿ ಮುಂದಿನ ವಾರ!

katvic
Published on

ಮುಂಬೈ: ಬಾಲಿವುಡ್​ ಸ್ಟಾರ್​ಗಳಾದ ವಿಕಿ ಕೌಶಲ್ ಮತ್ತು ಕತ್ರೀನಾ ಕೈಫ್​ ಮುಂದಿನ ತಿಂಗಳಲ್ಲಿ ರಾಜಸ್ಥಾನದಲ್ಲಿ ಅದ್ಧೂರಿ ವಿವಾಹ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇನ್ನೇನು ಈ ಸೆಲೆಬ್ರಿಟಿ ಜೋಡಿಯಿಂದ ಅಧಿಕೃತ ಆಮಂತ್ರಣ ಬರುತ್ತದೆ ಎಂಬ ನಿರೀಕ್ಷೆ ಇರುವಾಗ ಮತ್ತೊಂದು ಮಹತ್ವದ ಸುದ್ದಿ ಹೊರಬಿದ್ದಿದೆ. ಅದೆಂದರೆ ತಮ್ಮ ಸಾಂಪ್ರದಾಯಿಕ ಮದುವೆಯ ಮುನ್ನ ಇವರು 'ರಿಜಿಸ್ಟರ್ಡ್​ ಮ್ಯಾರೇಜ್'​ ಮಾಡಿಕೊಳ್ಳಲಿದ್ದಾರೆ ಎಂಬುದು.

ಹೌದು! ಬಾಲಿವುಡ್​ಲೈಫ್​ ಸುದ್ದಿಜಾಲದ ವರದಿಯ ಪ್ರಕಾರ ಕತ್ರೀನಾರ ಆಪ್ತ ಸ್ನೇಹಿತರಿಂದ ಈ ಮಾಹಿತಿ ಹೊರಬಿದ್ದಿದೆ. ಮುಂಬೈನ ಮದುವೆ ನೋಂದಣಿ ಕಛೇರಿಯಲ್ಲಿ ಮುಂದಿನ ವಾರ ಕಾನೂನು ರೀತ್ಯಾ ಪತಿಪತ್ನಿಯ ಪಾತ್ರಕ್ಕೆ ಎಂಟ್ರಿ ನೀಡಲಿದ್ದಾರೆ. ನಂತರ ಡಿಸೆಂಬರ್​ನಲ್ಲಿ ರಾಜಸ್ಥಾನದ ರಣತೊಂಬೋರ್​ ಬಳಿ ಇರುವ ರೆಸಾರ್ಟ್​ನಲ್ಲಿ ಮದುವೆ ಶಾಸ್ತ್ರಗಳನ್ನು ಎರಡು ದೊಡ್ಡ ಕಾರ್ಯಕ್ರಮಗಳ ಮೂಲಕ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಹಾಟ್​ ಕಪಲ್​ ಡೇಟಿಂಗ್ ಮಾಡುತ್ತಿರುವುದು ಬಹಳ ದಿನಗಳಿಂದ ಓಪನ್​ ಸೀಕ್ರೆಟ್​ ಆಗಿಬಿಟ್ಟಿದೆ. ಆದರೆ ಇಬ್ಬರೂ ತಮ್ಮ ನಡುವಿನ ಅನುಬಂಧದ ಬಗ್ಗೆಯಾಗಲಿ, ಮದುವೆಯ ಯೋಜನೆಯ ಬಗ್ಗೆಯಾಗಲಿ ತುಟಿಪಿಟಿಕ್​ ಎಂದಿಲ್ಲ. ಆದರೆ, ಕತ್ರೀನಾ ತಮ್ಮ ಕೆಲಸದಿಂದ ಬ್ರೇಕ್​ ತೆಗೆದುಕೊಂಡು ವಿಕಿ ಅಮ್ಮನ ಜೊತೆಗೆ ಮದುವೆ ತಯಾರಿಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ, ವಿಕಿ ತಮ್ಮ ಶೂಟ್​ಗಳನ್ನು ಬೇಗ ಮುಗಿಸುವ ಪ್ರಯತ್ನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net