More

    ಕತ್ರೀನಾ – ವಿಕಿ ಕೌಶಲ್ ಮದುವೆಗೆ ‘ನೋ ಫೋನ್​’​ ನಿಯಮ?!

    ಮುಂಬೈ: ಬಾಲಿವುಡ್​ ಚೆಲುವೆ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​​ರ ಮದುವೆ ಡಿಸೆಂಬರ್​ ತಿಂಗಳಲ್ಲಿ ರಾಜಸ್ಥಾನದ ಐಷಾರಾಮಿ ಫೋರ್ಟ್​ ರೆಸಾರ್ಟ್​ನಲ್ಲಿ ನಡೆಯಲಿದೆ ಎಂದು ಸುದ್ದಿ ಹರಡಿದೆ. ಈವರೆಗೂ ಇಬ್ಬರೂ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲವಾದರೂ, ಈ ಜೋಡಿಗೆ ಹತ್ತಿರವಾದವರು, ಮದುವೆ ಸಮಾರಂಭದ ಹಲವು ತಯಾರಿಗಳು ಗೌಪ್ಯವಾಗಿ ನಡೆಯುತ್ತಿರುವ ಬಗ್ಗೆ ತಿಳಿಸಿರುವುದಾಗಿ ಇಂಡಿಯ ಟುಡೇ ವರದಿ ಮಾಡಿದೆ.

    ತಮ್ಮ ಪ್ರೈವೆಸಿಗೆ ಧಕ್ಕೆಯಾಗದಂತೆ ತಮ್ಮ ವೆಡ್ಡಿಂಗ್​ ಫೋಟೋ ವಿಡಿಯೋಗಳು ತಮಗೆ ಅರಿವಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾಗದಂತೆ ಈ ಜೋಡಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ವೆಡ್ಡಿಂಗ್ ಪ್ಲಾನರ್​ಗಳಿಗೆ ತಮ್ಮ ಅನುಮತಿಯಿಲ್ಲದೆ ಯಾವುದೇ ಫೋಟೋ-ವಿಡಿಯೋ ಬಿಡುಗಡೆಯಾಗಬಾರದು ಎಂದು ತಾಕೀತು ಮಾಡಿದ್ದಾರೆ. ಜೊತೆಗೆ, ಪಾಲ್ಗೊಳ್ಳಲಿರುವ ಅತಿಥಿಗಳಿಗೆ ನಿರ್ದಿಷ್ಟ ಸ್ಥಳಗಳಿಗೆ ಮೊಬೈಲ್​ ಫೋನ್​ ತೆಗೆದುಕೊಂಡು ಹೋಗದಂತೆ ಮನವಿ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಕೆರೆಗೆ ಬಿದ್ದು ಯುವತಿ ಸಾವು: ಫಾರ್ಮ್​ ಮಾಲಿಕರ ಮೇಲೆ ಪೊಲೀಸ್ ಕೇಸ್​

    ಈ ರೀತಿಯಾಗಿ ಮದುವೆಯ ದೃಶ್ಯಗಳು ಲೀಕ್​ ಆಗದಂತೆ ಎಚ್ಚರ ವಹಿಸಲು ‘ನೋ ಫೋನ್’​ ನೀತಿ ಅನುಸರಿಸಿದವರಲ್ಲಿ ಇವರು ಮೊದಲಿಗರೇನಲ್ಲ. ಹಲವು ಸೆಲೆಬ್ರಿಟಿ ವೆಡ್ಡಿಂಗ್​ಗಳಲ್ಲಿ ಈ ನಿಯಮ ಜಾರಿಯಾಗಿರುವುದು ಕಂಡುಬಂದಿದೆ. ಬಾಲಿವುಡ್​ ದಿವಾ ಪ್ರಿಯಾಂಕಾ ಚೋಪ್ರ ಮತ್ತು ರಾಕ್​ ಸ್ಟಾರ್​​ ನಿಕ್​ ಜೋನಸ್​ ವಿವಾಹದ ಸಂದರ್ಭದಲ್ಲಿ ಅತಿಥಿಗಳ ಫೋನ್​ಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಬಾಲಿವುಡ್​ನ ಮತ್ತೊಂದು ಜೋಡಿ ದೀಪಿಕಾ ಪಡುಕೋಣೆ-ರಣವೀರ್​ ಸಿಂಗ್​ ಕೂಡ ಲೇಕ್​ ಕೋಮೊದಲ್ಲಿ ನಡೆದ ತಮ್ಮ ಮದುವೆಯ ಸಂದರ್ಭದಲ್ಲಿ ಬಂಧುಮಿತ್ರರಿಗೆ ಫೋನ್ ಬಳಸದಂತೆ ಮನವಿ ಮಾಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    VIDEO| ಆಕಾಶದಲ್ಲಿ ಕಾಣಿಸಿಕೊಂಡ ಹತ್ತಿ ಉಂಡೆಗಳು! ವಿಡಿಯೋ ವೈರಲ್​!

    ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts