More

    VIDEO| ಆಕಾಶದಲ್ಲಿ ಕಾಣಿಸಿಕೊಂಡ ಹತ್ತಿ ಉಂಡೆಗಳು! ವಿಡಿಯೋ ವೈರಲ್​!

    ಅರ್ಜೆಂಟಿನಾ: ಇತ್ತೀಚೆಗೆ ಅರ್ಜೆಂಟಿನಾದಲ್ಲಿ ಅಪರೂಪದ ಕಪ್ಪುಮಿಶ್ರಿತ ಬಿಳಿಯ ಚೆಂಡುಗಳಂಥ ಮಳೆಮೋಡಗಳು ಕಾಣಿಸಿಕೊಂಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಆಕಾಶದಲ್ಲಿ ಹತ್ತಿಯ ಉಂಡೆಗಳನ್ನು ಜೋಡಿಸಿಟ್ಟ ಹಾಗೆ ತೋರುವ ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

    (ವಿಡಿಯೋ ಕೃಪೆ: ಮೀಟಿಯೊರೆಡ್​)

    ನವೆಂಬರ್​ 13 ರಂದು ಕಾರ್ಡೋಬಾದ ಕ್ಯಾಸಾ ಗ್ರಾಂಡೆಯ ಆಕಾಶದಲ್ಲಿ ತುಂಬಿಕೊಂಡಿದ್ದ ಮಮ್ಮಾಟಸ್​ ಕ್ಲೌಡ್ಸ್​ ಎಂದು ಕರೆಯಲ್ಪಡುವ ಈ ಮೋಡಗಳು ಗುಡುಗು ಸಿಡಿಲುಸಹಿತ ಮಳೆಗಳನ್ನು ತರುವಂಥವು. ಈ ವಿಶೇಷ ರೀತಿಯ ಮೋಡಗಳನ್ನು ನೋಡಿ ಸ್ಥಳೀಯರು ಬೆರಗಾದರು. ನಂತರ ಈ ಪ್ರದೇಶದಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆ ವರದಿಯಾಗಿದೆ. (ಏಜೆನ್ಸೀಸ್)

    ಎಸಿಬಿ ದಾಳಿ: ಹೆಸ್ಕಾಂ ನೌಕರನ ಐಷಾರಾಮಿ ಮನೆಯಲ್ಲಿ ಲಿಫ್ಟ್​ ಕೂಡ ಇದೆ!

    ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts