More

    VIDEO|ಜಸ್ಟ್ ಮಿಸ್​.. ಇಲ್ಲಾಂದ್ರೆ 8 ಅಡಿ ಉದ್ದದ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬೀಳ್ತಾ ಇತ್ತು !

    ವ್ಲಾಡಿವೋಸ್ಟೋಕ್​: ಜಸ್ಟ್ ಮಿಸ್​… ಇಲ್ಲಾಂದ್ರೆ 8 ಅಡಿ ಉದ್ದದ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬೀಳ್ತಾ ಇತ್ತು.. ರಷ್ಯಾದ ಬಂದರು ನಗರಿ ವ್ಲಾಡಿವೋಸ್ಟೋಕ್​ನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ಇದು. ಸಿಸಿಕ್ಯಾಮರಾದಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು, ನಂತರ ಇದು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದೆ.

    ಹಿಂಬದಿ ಸೀಟಿನಲ್ಲಿತ್ತು 5 ವರ್ಷದ ಮಗು!

    ಕಾರಿನ ಹಿಂಬದಿ ಸೀಟಿನಲ್ಲಿ ಐದು ವರ್ಷದ ಹೆಣ್ಣು ಮಗು ಒಂದಿತ್ತು. ಅದೃಷ್ಟವಶಾತ್ ಆಕೆ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾಳೆ. ಆಕೆಯ ತಂದೆ ತನಗೆ ಮತ್ತು ಮಗಳಿಗೆ ಇದು ಎರಡನೇ ಜನ್ಮ ಎಂದು ಹೇಳಿಕೊಂಡು ದೇವರನ್ನು ಕೊಂಡಾಡಿದ್ದಾರೆ.

    ಸಿಸಿಟಿವಿ ದೃಶ್ಯದಲ್ಲಿರುವುದು ಇಷ್ಟು- ಹಿಮಾವೃತ್ತವಾದ ನಗರದಲ್ಲಿ ಕಾರುಗಳ ಮೇಲೆಲ್ಲ ಹಿಮದ ಹೊದಿಕೆ. ಕಾರಿನ ಬಳಿ ಬಂದ ವ್ಯಕ್ತಿ ಅದರ ವಿಂಡ್​ ಸ್ಕ್ರೀನ್​ ಮೇಲಿದ್ದ ಹಿಮವನ್ನು ದೂರ ಸರಿಸುತ್ತಿದ್ದ. ಅಷ್ಟರಲ್ಲಿ ಅದೇನೋ ಸದ್ದಾದಂತಾಗಿ ಮೇಲೆ ನೋಡಿದ.. ಕೂಡಲೇ ಹಿಂದಕ್ಕೋಡಿದ. ಅದೇ ಹೊತ್ತಿಗೆ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಒಂದು ಕಾರಿನ ಮಧ್ಯಭಾಗಕ್ಕೇ ಬಿದ್ದುಬಿಟ್ಟಿತು. ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

    ಇದನ್ನೂ ಓದಿ:  ಶಿವಸೇನಾ ಕಾರ್ಯಕರ್ತ ‘ಕರಾಚಿ’ ಸ್ವೀಟ್ಸ್ ಹೆಸರು ಬದಲಿಸಿ ಅಂದ: ಆ ಬೇಡಿಕೆ ಪಕ್ಷದ್ದಲ್ಲ ಎಂದ ಶಿವಸೇನೆ !

    ಈ ಘಟನೆ ನಡೆದಿರುವುದು ನೆಬುಟಾ ಸ್ಟ್ರೀಟ್​ನಲ್ಲಿ. ಒಂಭತ್ತನೇ ಮಹಡಿಯಿಂದ ಸ್ಲ್ಯಾಬ್ ಬಿದ್ದಿದೆ. 8 ಅಡಿ ಉದ್ದ 4 ಅಡಿ ಅಗಲ ಇತ್ತು ಅದು. ಈ ನಗರ ಹಿಮಾವೃತವಾದಾಗ ಕಟ್ಟಡಗಳ ಮೇಲಿನ ಸಿಮೆಂಟ್ ಸ್ಲ್ಯಾಬ್ ಬೀಳುವುದು ಹೊಸದಲ್ಲ. ಈ ಹಿಂದೆಯೂ ಇದೇ ರೀತಿ ಸಿಮೆಂಟ್ ಸ್ಲ್ಯಾಬ್ ಬೇರೊಂದು ವಾಹನದ ಮೇಲೆ ಬಿದ್ದಿತ್ತು. ಸಿಮೆಂಟ್ ಸ್ಲ್ಯಾಬ್ ಬೀಳುತ್ತಿರುವುದು ನಿಗೂಢವಾಗಿದ್ದು, ರಹಸ್ಯ ಬೇಧಿಸುವ ಪ್ರಯತ್ನವನ್ನು ಅಧಿಕಾರಿಗಳು ನಡೆಸಿದ್ದಾರೆ. (ಏಜೆನ್ಸೀಸ್)

    ವಿಡಿಯೋ ನೋಡಲು ಈ ಲಿಂಕ್​ ಕ್ಲಿಕ್ಕಿಸಿ: ಜಸ್ಟ್ ಮಿಸ್​.. ಇಲ್ಲಾಂದ್ರೆ 8 ಅಡಿ ಉದ್ದದ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬೀಳ್ತಾ ಇತ್ತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts