ಮುಂಬೈ: ಇತ್ತೀಚಿನ ವರ್ಷಗಳಲ್ಲಿ ನಟ ವಿಕ್ಕಿ ಕೌಶಲ್ ಮುಟ್ಟಿದೆಲ್ಲಾ ಚಿನ್ನ ಎಂಬಂತಾಗಿದೆ. ಕೆಲ ದಿನಗಳ ಹಿಂದೆ ಬಿಡುಗಡೆಗೊಂಡ ಅವರ ನಟನೆಯ ಬ್ಯಾಡ್ ನ್ಯೂಸ್ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಪ್ರಸ್ತುತ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದ ಛಾವಾ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಿರುವ ನಟ ವಿಕ್ಕಿ ಕೌಶಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ನಟಿಯಾಗಿ ಸೌಂಡ್ ಮಾಡುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಛಾವಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣರನ್ನು ವಿಕ್ಕಿ ಕೌಶಲ್ ಹಾಡಿ ಹೊಗಳಿದ್ದಾರೆ. ಅವರ ನಟನೆ ಹಾಗೂ ಸೆಟ್ನಲ್ಲಿ ಇರುತ್ತಿದ್ದ ರೀತಿ ಬಗ್ಗೆ ಮಾತನಾಡಿರುವ ನಟ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಗ್ರಹಾಂ ಥೋರ್ಪ್ ಅವರದ್ದು ಸಹಜ ಸಾವಲ್ಲ; ವರದಿಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟ, ಆಕೆ ಅದ್ಭುತ ವ್ಯಕ್ತಿ, ಯಾವಾಗ ಭೇಟಿಯಾದರೂ ಸದಾ ಪಾಸಿಟಿವಿಯಿಂದ ಇರುತ್ತಾರೆ. ಸೆಟ್‌ಗೆ ರಶ್ಮಿಕಾ ಬಂದಾಗ ಪಾಸಿಟಿವಿ ಇರುತ್ತದೆ. ಕೆಲಸದ ವಿಚಾರವಾಗಿ ಬೇರೊಬ್ಬರನ್ನು ಸದಾ ಬೆಂಬಲಿಸುತ್ತಾರೆ. ಛಾವಾ ಸಿನಿಮಾದಲ್ಲಿ ಕೆಲಸ ಮಾಡುವಾಗ ರಶ್ಮಿಕಾ ಜೊತೆ ಉತ್ತಮ ಸಮಯ ಕಳೆದಿದ್ದೇನೆ. ಯಾವಾಗಲೂ ಅವರು ಖುಷಿಯಿಂದ ಇರುತ್ತಾರೆ. ಅದು ಹೇಗೆ ಎಂಬುದು ನನಗೆ ಈಗಲೂ ತಿಳಿದಿಲ್ಲ.
ಲಕ್ಷ್ಮಣ್ ಉಟೇಕರ್ ನಿರ್ದೇಶನ ಈ ಚಿತ್ರವು ಛತ್ರಪತಿ ಶಿವಾಜಿ ಮಹಾರಾಜರ ಮಗ ಮರಾಠಾ ಚಕ್ರವರ್ತಿ ಸಂಭಾಜಿಯ ಜೀವನವನ್ನು ಆಧರಿಸಿ ಮಾಡಲಾಗುತ್ತಿದೆ. ವಿಕ್ಕಿ ಮತ್ತು ರಶ್ಮಿಕಾ ಮಾತ್ರವಲ್ಲದೇ ಚಿತ್ರದಲ್ಲಿ ಅಕ್ಷಯ್ ಖನ್ನಾ, ಅಶುತೋಷ್ ರಾಣಾ ಮತ್ತು ದಿವ್ಯಾ ದತ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಈ ವರ್ಷ ಡಿಸೆಂಬರ್ 6ರಂದು ಚಿತ್ರವು ವಿಶ್ವದಾದ್ಯಂತ ತೆರೆ ಕಾಣಲಿದೆ.