ಫೋಟೋಗಳಲ್ಲಿ ನೋಡಿ ವಾಸುಕಿ ವೈಭವ್​ ಮದುವೆಯ ಸುಂದರ ಕ್ಷಣಗಳನ್ನು

Vasuki Vaibhav
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 7ರ ಸ್ಫರ್ಧಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ನವೆಂಬರ್​ 16ರಂದು ತಮ್ಮ ದೀರ್ಘಕಾಲದ ಗೆಳತಿ ಬೃಂದಾ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾಗಿ ತಿಂಗಳು ಕಳೆದ ಬಳಿಕ ವಾಸುಕಿ ವೈಭವ್​ ತಮ್ಮ ಮದುವೆಯ ಸುಂದರ ಕ್ಷಣದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಫೋಟೋಗಳನ್ನು ಶೇರ್​ ಮಾಡುವ ಮೂಲಕ ವಿಶೇಷವಾಗಿ ವಿಷ್​ ಮಾಡಿರುವ ವಾಸುಕಿ ವೈಭವ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Vasuki Vaibhav

ಬೃಂದಾ ವಿಕ್ರಮ್ ಮತ್ತು ವಾಸುಕಿ ವೈಭವ್ ಬೆನಕ ತಂಡದಲ್ಲಿಯೇ ಪರಿಚಯ ಆಗಿದ್ದರು. ಅಲ್ಲಿಯೇ ಈ ಗೆಳಯರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ವಿವಿಧ ನಾಟಕಗಳಲ್ಲೂ ಒಟ್ಟಿಗೆ ಅಭಿನಯಿಸಿದ್ದಾರೆ. ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ವಿಶೇಷ ಸಂದರ್ಭದಲ್ಲೂ ಬೀದಿ ನಾಟಕಗಳಲ್ಲಿ ಒಟ್ಟಿಗೆ ಭಾಗವಹಿಸಿರುವುದು ಇದೆ. ಆದರೆ ಈ ಬಗ್ಗೆ ವಾಸುಕಿ ವೈಭವ್ ಎಲ್ಲೂ ಹೇಳಿಕೊಂಡಿರಲಿಲ್ಲ.

Vasuki Vaibhav Marriage

ಸದ್ಯ ವಾಸುಕಿ ವೈಭವ್​ ಮದುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಹಲವರು ಈ ಮುದ್ದಾದ ಜೋಡಿಗೆ ಶುಭ ಹಾರೈಸಿದ್ದಾರೆ. ವಾಸುಕಿ ಮದುವೆಗೆ ಡಾಲಿ, ಕಿಶನ್, ದೀಪಿಕಾ ದಾಸ್, ಸಾನ್ಯ ಅಯ್ಯರ್, ಶೈನ್ ಶೆಟ್ಟಿ, ಕೃಷಿ ತಾಪಂಡ, ಶೃತಿ ಹರಿಹರನ್, ಮೇಘನಾ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ನವದಂಪತಿಗಳಿಗೆ ಶುಭ ಹಾರೈಸಿದ್ದರು.

Vasuki Vaibhav Marriage
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net