More

    ಕ್ರಿಸ್​ಮಸ್​ ಕೇಕ್​ನಲ್ಲಿ ಮೂಡಿತ್ತು ರಾಮಮಂದಿರ; ವಿಡಿಯೋ ವೈರಲ್

    ಕಲ್ಕತ್ತಾ: ಇಂದು ದೇಶಾದ್ಯಂತ ಸಂಭ್ರಮ-ಸಡಗರದಿಂದ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಲಾಗುತ್ತಿದೆ. ಇನ್ನೂ ಕ್ರಿಸ್​ಮಸ್​ ಹಬ್ಬವನ್ನು ಮುಖ್ಯವಾಗಿ ಕೇಕ್​ ಇಲ್ಲದೇ ಆಚರಿಸಲು ಸಾಧ್ಯವಿಲ್ಲ. ಕೆಲವರು ತಮ್ಮ ಮನೆಯಲ್ಲಿಯೇ ಕೇಕ್​ ತಯಾರಿಸದರೆ ಇನ್ನಷ್ಟು ಜನ ಹೊರಗಡೆ ತಮಗೆ ಬೇಕಾದ ರೀತಿಯಲ್ಲಿ ಮಾಡಿಸಿಕೊಂಡು ತರುತ್ತಾರೆ.

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ  ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ  ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ.

    ಇತ್ತೀಚಿಗೆ ಗುಜರಾತಿನ ವಜ್ರದ ವ್ಯಾಪಾರಿಯೊಬ್ಬರು, ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು  ರಾಮ ಮಂದಿರದ ಪರಿಕಲ್ಪನೆಯಲ್ಲಿ ವಜ್ರದ ಹಾರವನ್ನು ತಯಾರಿಸಿ ಸುದ್ದಿಯಲ್ಲಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಭಕ್ತರೊಬ್ಬರು 45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಅಗರಬತ್ತಿಯನ್ನು ಶ್ರೀ ರಾಮನಿಗೆ ಕಾಣಿಕೆಯಾಗಿ ನೀಡಿ ಸುದ್ದಿಯಲ್ಲಿದ್ದರು.

    ಇದನ್ನೂ ಓದಿ: IPL2024| ಹಾರ್ದಿಕ್​ ಪಾಂಡ್ಯ ಖರೀದಿಗಾಗಿ 100 ಕೋಟಿ ರೂ. ವ್ಯಯಿಸಿದ ಮುಂಬೈ ಇಂಡಿಯನ್ಸ್!

    ಅದೇ ರೀತಿ ಇಲ್ಲೊಬ್ಬರು ಕೇಕ್ ಆರ್ಟಿಸ್ಟ್ ತಾನು ಕೂಡಾ ರಾಮ ಮಂದಿರದ ಸಲುವಾಗಿ ಏನಾದರೂ ವಿಶಿಷ್ಟವಾದದ್ದು ಮಾಡಬೇಕೆಂದು, ರಾಮ ಮಂದಿರ ಥೀಮ್ ಅಲ್ಲಿ ಕ್ರಿಸ್ಮಸ್ ಕೇಕ್ ಅನ್ನು ತಯಾರಿಸಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದ ಕೇಕ್ ಆರ್ಟಿಸ್ಟ್ ಪ್ರಿಯಾಂಕ ಎಂಬುವವರು ರಾಮ ಮಂದಿರ ಥೀಮ್ ಅಲ್ಲಿ ಕೇಕ್ ತಯಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಈ ಕುರಿತು ಮಾತನಾಡಿರುವ ಪ್ರಿಯಾಂಕ, ಜನವರಿ 22ರಂದು ಲೋಕಾರ್ಪಣೆಗೊಳ್ಳಲಿರುವ ರಾಮಮಂದಿರಕ್ಕೆ ಏನನ್ನಾದರು ಮಾಡಲು ಬಯಸಿದ್ದೆ, ನಾನು ಕೇಕ್ ಆರ್ಟಿಸ್ಟ್ ಆಗಿರುವುದರಿಂದ  ರಾಮ ಮಂದಿರ ಥೀಮ್ ಅಲ್ಲಿ ಕೇಕ್ ತಯಾರಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts