

ಪುತ್ತೂರು ಗ್ರಾಮಾಂತರ: ಕಾವು ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಕಾವು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ, ಮುದ್ದು ರಾಧಾ- ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಕ್ರೀಡಾಕೂಟ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವ ಸಲಹೆಗಾರ ಚಂದ್ರಶೇಖರ್ ನಿಧಿಮುಂಡ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಕೋಶಾಧಿಕಾರಿ ಕೃಷ್ಣಪ್ರಸಾದ್ ಕೊಚ್ಚಿ, ಜತೆ ಕಾರ್ಯದರ್ಶಿ ವಿಶ್ವನಾಥ ಕೆರೆಮಾರು ಮತ್ತಿತರರಿದ್ದರು. ಸಮಿತಿ ಸದಸ್ಯ ಯೋಗೀಶ್ ಹೊಸಮನೆ ಕಾವು ವಂದಿಸಿದರು. ದಿವ್ಯಪ್ರಸಾದ್ ನಿರೂಪಿಸಿದರು.
ಕಾವು ಗೆಳೆಯರ ಬಳಗ ವತಿಯಿಂದ ಪುಟಾಣಿಗಳಿಗೆ ಮುದ್ದು ರಾಧಾ- ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಿತಿ ಗೌರವ ಸಲಹೆಗಾರ ಲೋಕೇಶ್ ಚಾಕೋಟೆ, ಗೆಳೆಯರ ಬಳಗದ ನಾರಾಯಣ ಆಚಾರ್ಯ ಮಳಿ, ಪ್ರಮುಖರಾದ ಸೌಮ್ಯಾ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಸುಂದರ ಪೂಜಾರಿ ಕೆರೆಮಾರು, ಶಾಂತಾ ಜೆ.ರೈ, ಭಾಸ್ಕರ ಬಲ್ಯಾಯ ಮತ್ತಿತರರು ಉಪಸ್ಥಿತರಿದ್ದರು.