ಸಂವಿಧಾನದಲ್ಲಿ ಸರ್ವರಿಗೂ ಸಮಾನ ಅವಕಾಶ : ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾ ಅಭಿಪ್ರಾಯ

New Project (41)
Published on

ಉಳ್ಳಾಲ: ಡಾ.ಬಿ.ಆರ್.ಅಂಬೇಡ್ಕ ಅವರ ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದ್ದು, ಅತ್ಯಂತ ತಳಮಟ್ಟದ ಸಮುದಾಯದವರೂ ಉನ್ನತ ಹುದ್ದೆಗೇರಲು ಅವಕಾಶ ಕಲ್ಪಿಸಿದೆ. ಉಳ್ಳಾಲ ಭಾಗದಲ್ಲಿ ಎಲ್ಲರೂ ಒಂದೇ ಜಾತಿ, ಒಂದೇ ಮತ ಎಂಬ ತತ್ವದಡಿ ಸೌಹಾರ್ದತೆಯೊಂದಿಗೆ ಬದುಕಬೇಕಿದೆ ಎಂದು ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾ ಅಭಿಪ್ರಾಯಪಟ್ಟರು.

ಉಳ್ಳಾಲ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟಿನಲ್ಲಿ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು.

ಉಳ್ಳಾಲ ನಗರಸಭೆ ಇದುವರೆಗೆ 30 ಕೋಟಿ ರೂ.ಗೂ ಹೆಚ್ಚಿನ ಅನುದಾನದೊಂದಿಗೆ ಸಮಗ್ರ ಅಭಿವೃದ್ಧಿ ಹೊಸ್ತಿಲಿನಲ್ಲಿದ್ದು ಭವಿಷ್ಯದ ದಿನಗಳಲ್ಲಿ ಕೋಟೆಪುರದಿಂದ ಬೋಳಾರ ಸಂಪರ್ಕಿಸುವ ಸೇತುವೆ ಹಾಗೂ ಉಳ್ಳಾಲ ಮಿನಿ ಮೀನುಗಾರಿಕಾ ಜೆಟ್ಟಿ ನಿರ್ಮಾಣದ ಬೃಹತ್ ಯೋಜನೆಗಳೊಂದಿಗೆ ಸುಂದರ ನಗರವಾಗಿ ಮಾರ್ಪಾಡಾಗಲಿದೆ ಎಂದರು.

ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ಸಪ್ನಾ ಹರೀಶ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರ್ ಪಪಂ ಮುಖ್ಯಾಧಿಕಾರಿ ಶಾಲಿನಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಶಿಶು ಅಭಿವೃದ್ಧಿ ಅಧಿಕಾರಿ ಶೈಲಾ ಕಾರಗಿ ಉಪಸ್ಥಿತರಿದ್ದರು.

ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಸ್ವಾಗತಿಸಿ. ಉಳ್ಳಾಲ ನಗರಸಭಾ ಪೌರಾಯುಕ್ತ ನವೀನ್ ಹೆಗ್ಡೆ ವಂದಿಸಿ. ಶಿಕ್ಷಕರಾದ ತ್ಯಾಗಂ ಹರೇಕಳ, ಕೆಎಂಕೆ ಮಂಜನಾಡಿ ಹಾಗೂ ಮೋಹನ್ ಶಿರ್ಲಾಲ್ ನಿರೂಪಿಸಿದರು.

ಬಹುಮಾನ

ಪಥಸಂಚಲನ ಪ್ರಾಥಮಿಕ ವಿಭಾಗದಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನ ಶಾಲೆ ಪ್ರಥಮ, ಉಚ್ಚಿಲ ಬೋವಿ ಆಂಗ್ಲಮಾಧ್ಯಮ ಶಾಲೆ ದ್ವಿತೀಯ. ಪ್ರೌಢಶಾಲಾ ವಿಭಾಗದಲ್ಲಿ ಉಚ್ಚಿಲ ಬೋವಿ ಆಂಗ್ಲಮಾಧ್ಯಮ ಶಾಲೆ ಪ್ರಥಮ ಹಾಗೂ ತಲಪಾಡಿ ಶಾರದಾ ವಿದ್ಯಾನಿಕೇತನ ಶಾಲೆ ದ್ವಿತೀಯ ಬಹುಮಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net