

ಕಾಸರಗೋಡು: ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ತನಕ ರಸ್ತೆ ಕೆಲವು ತಿಂಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲದಂತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಗೆ ಮುಂದಾಗದಿದ್ದರೆ ಬಿಎಂಎಸ್ ಪ್ರಬಲ ಹೋರಾಟ ಆಯೋಜಿಸಲಿದೆ ಎಂದು ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೊಟಕಣಿ ಎಚ್ಚರಿಕೆ ನೀಡಿದರು.
ನಗರದ ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ತನಕದ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಸಮಿತಿ ವತಿಯಿಂದ ಬುಧವಾರ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ಜಿಲ್ಲಾ ಸಮಿತಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದಲ್ಲಿ ಕೊನೆಗೊಂಡಿತು.
ಬಿಎಂಎಸ್ ಕಾಸರಗೋಡು ಪ್ರದೇಶ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಪ್ರಮುಖರಾದ ದಿನೇಶ್ ಬಂಬ್ರಾಣ, ಹರೀಶ್ ಕುದುರೆಪಾಡಿ, ಗುರುದಾಸ್ ಚೇನಕೋಡ್, ಕುಞಿಕಣ್ಣನ್ ಪರವನಡ್ಕ, ಶ್ರೀಧರನ್ ಚೇನಕೋಡ್, ಎ.ಕೇಶವ, ಎಸ್.ಕೆ. ಉಮೇಶ, ಭಾಸ್ಕರನ್ ಪೊಯಿನಾಚಿ, ಮನೋಜ್ ಕುಮಾರ್ ಇದ್ದರು. ಬಾಬು ಮೋನ್ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ ವಂದಿಸಿದರು.