ಈಶ್ವರಮಂಗಲದಲ್ಲಿ ಮೊಸರು ಕುಡಿಕೆ ಉತ್ಸವ

New Project (1)
Published on

ಪುತ್ತೂರು ಗ್ರಾಮಾಂತರ: ಈಶ್ವರಮಂಗಲ ಜಾಗೃತ ಹಿಂದು ಜಾಗರಣ ಸಂಟನೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯಕ್ತ 10ನೇ ವರ್ಷದ ಈಶ್ವರಮಂಗಲ ಮೊಸರುಕುಡಿಕೆ ಉತ್ಸವ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಬೃಹತ್ ಶೋಭಾಯಾತ್ರೆ, ಶ್ರೀಕೃಷ್ಣ ನೃತ್ಯೋತ್ಸವ, ಅಟ್ಟಿಮಡಿಕೆ ಕಬಾತ್ ಒಡೆಯುವ ಸಾಹಸಮಯ ಸ್ಪರ್ಧೆಗಳೊಂದಿಗೆ ನಡೆಯಿತು.

ಉದ್ಯಮಿ ಕೃಷ್ಣ ಭಟ್ ಕೊಂಬೆಟ್ಟು ಶೋಭಾಯಾತ್ರೆಗೆ ಚಾಲನೆ ನೀಡಿದರು. ಈಶ್ವರಮಂಗಲ ಪೇಟೆಯಲ್ಲಿ ಅಟ್ಟಿಮಡಿಕೆ ಹೊಡೆಯುವುದರೊಂದಿಗೆ ಸಾಗಿದ ಭವ್ಯ ಶೋಭಾಯಾತ್ರೆ ಪಂಚಲಿಂಗೇಶ್ವರ ದೇವಸ್ಥಾನದ ತನಕ ನಡೆಯಿತು. ಬಳಿಕ ದೇವಸ್ಥಾನ ವಠಾರದಲ್ಲಿ ಬೃಹತ್ ಕಬಾತ್ ಒಡೆಯುವ ಸ್ಪರ್ಧೆ ನಡೆಯಿತು. ಈಶ್ವರಮಂಗಲದ ಮೇ.ಸಂದೀಪ್ ಉಣ್ಣಿಕೃಷ್ಣನ್ ವೃತ್ತದ ಬಳಿ ಪಂಚೋಡಿ ಮತ್ತು ದೇಲಂಪಾಡಿಯ ಶ್ರೀರಾಮ ಲಹರಿ ನಾಟ್ಯಾಲಯ ಹಾಗೂ ಈಶ್ವರಮಂಗಲದ ವರ್ಣಂ ನೃತ್ಯ ತಂಡದಿಂದ ನಡೆದ ‘ಶ್ರೀಕಷ್ಣ ನೃತ್ಯೋತ್ಸವ’ ಕಾರ್ಯಕ್ರಮದ ವಿಶೇಷ ಆಕರ್ಷಣೆೆಯಾಗಿತ್ತು.

ಈಶ್ವರಮಂಗಲದ ಜಾಗೃತ ಹಿಂದು ಜಾಗರಣ ಸಂಟನೆ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನೆಎರವೇರಿತು. ಪಂಚಲಿಂಗೇಶ್ವರ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಅರ್ಚಕ ರವೀಂದ್ರ ಮಾಣಿಲತ್ತಾಯ, ದೇಲಂಪಾಡಿ ಹಿಂದು ಐಕ್ಯವೇದಿ ಸಂಟನೆ ಅಧ್ಯಕ್ಷ ಮೋಹನ್ ವಾಲ್ತಾಜೆ, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಸನತ್ ರೈ ಮೂಡಾಯೂರು, ಬಿಜೆಪಿ ಯುವಮೋರ್ಚಾ ಪುತ್ತೂರು ಮಂಡಲ ಉಪಾಧ್ಯಕ್ಷ ವಿನೋದ್‌ರಾಜ್ ರೈ ಅಣಿಲೆ, ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ ಉಪಸ್ಥಿತರಿದ್ದರು.

ಗೌರೀಶ್ ಈಶ್ವರಮಂಗಲ ಸ್ವಾಗತಿಸಿದರು. ಚರಣ್ ವಾಲ್ತಾಜೆ ವಂದಿಸಿದರು. ವಕೀಲ ಚಿನ್ಮಯ್ ಈಶ್ವರಮಂಗಲ ನಿರೂಪಿಸಿದರು. ಕಬಾತ್ ಒಡೆಯುವ ಸ್ಪರ್ಧೆಯಲ್ಲಿ ಕಲ್ಲುಗುಡ್ಡೆಯ ವೀರ ಸಾವರ್ಕರ್ ತಂಡ ವಿಜೇತರಾಗಿ 10,025 ರೂ. ನಗದು ಬಹುಮಾನ ಮತ್ತು ಶಿವಾಜಿ ಟ್ರೋಫಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net