

ತಮಿಳಿನ ಖ್ಯಾತ ನಟ ವಿಜಯಕುಮಾರ್ ಅವರ ಪುತ್ರಿ ವನಿತಾ ವಿಜಯಕುಮಾರ್ ಅವರು ಭಾನುವಾರವಷ್ಟೇ ಪೀಟರ್ ಪಾಲ್ ಎನ್ನುವವರು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಚೆನ್ನೈನಲ್ಲಿ ಮದುವೆಯಾದರು. ಇದು ವನಿತಾ ವಿಜಯಕುಮಾರ್ ಅವರ ಮೂರನೆಯ ಮದುವೆಯಾಗಿದ್ದು, ಈ ಹಿಂದಿನ ಎರಡು ಮದುವೆಗಳಿಂದ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ವಿಷಯ ಅದಲ್ಲ, ವನಿತಾ ಮತ್ತು ಪೀಟರ್ ಮದುವೆಯಾದ ಸ್ವಲ್ಪ ಹೊತ್ತಿಗೇ ಚೆನ್ನೈನ ವಡಪಳನಿ ಪೊಲೀಸ್ ಠಾಣೆಯಲ್ಲಿ ಪೀಟರ್ ಮತ್ತು ವನಿತಾ ಅವರ ಮೇಲೊಂದು ಪೊಲೀಸ್ ಕಂಪ್ಲೇಂಟ್ ಆಗಿದೆ. ಕಂಪ್ಲೇಂಟ್ ಕೊಟ್ಟಿರುವವರು, ಪೀಟರ್ ಅವರ ಮೊದಲ ಹೆಂಡತಿ ಎಲಿಜಬೆತ್ ಹೆಲೆನ್. ತಮ್ಮನ್ನು ಡೈವೋಸ್ರ್ ಮಾಡದೆಯೇ ಪೀಟರ್, ವನಿತಾ ಅವರನ್ನು ಮದುವೆಯಾಗಿದ್ದಾರೆ ಎಂದು ಎಲಿಜಬೆತ್ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಪೀಟರ್ ತಮ್ಮನ್ನು ಏಳು ವರ್ಷಗಳಿಂದ ದೂರ ಮಾಡಿದ್ದಾರೆ ಎಂದು ಸಹ ದೂರಿದ್ದಾರೆ.
ಈ ಕುರಿತು ಮಾತನಾಡಿರುವ ವನಿತಾ, ಎಲಿಜಬೆತ್ ಇಷ್ಟೆಲ್ಲಾ ಮಾಡುತ್ತಿರುವುದು ದುಡ್ಡಿಗಾಗಿ ಎಂದು ಅವರ ಮೇಲೆ ಆರೋಪ ಹೊರಿಸಿದ್ದಾರೆ. 'ಎಲಿಜಬೆತ್, ಪೀಟರ್ ಹತ್ತಿರ ಒಂದು ಕೋಟಿಯ ಡಿಮ್ಯಾಂಡ್ ಇಟ್ಟಿದ್ದರು. ಆದರೆ, ಪೀಟರ್ ಹತ್ತಿರವಾಗಲೀ, ನನ್ನ ಬಳಿಯಾಗಲೀ ಅಷ್ಟೊಂದು ಹಣ ಇಲ್ಲವೇ ಇಲ್ಲ. ಹಾಗಾಗಿ ಅವರಿಗೆ ಕೊಡುವುದಕ್ಕೆ ಸಾಧ್ಯವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಅವರಿಬ್ಬರೂ ದೂರವಾಗಿ ಎಂಟು ವರ್ಷಗಳಾಗಿವೆ. ಇಷ್ಟು ವರ್ಷ ಸುಮ್ಮನಿದ್ದು, ಈಗ ಮದುವೆಯಾದ ಮೇಲೆ ಅವರು ಈ ರೀತಿ ಮಾಡುತ್ತಿರುವುದನ್ನು ನೋಡಿದರೆ, ಅವರ ಉದ್ದೇಶ ನಮ್ಮ ಹತ್ತಿರ ದುಡ್ಡು ಕೀಳುವುದು ಬಿಟ್ಟರೆ ಬೇರೇನೂ ಇಲ್ಲ' ಎಂದು ವನಿತಾ ಹೇಳಿದ್ದಾರೆ.
ಇದನ್ನೂ ಓದಿ: ಯಶ್ ನೀಡಿದ ಮೂರು ಬೆರಳಿನ ಸಿಗ್ನಲ್ ಏನಿರಬಹುದು?
ಇನ್ನು, ಈ ವಿಷಯವನ್ನು ನ್ಯಾಯಯುತವಾಗಿ ಹೋರಾಡುವುದಾಗಿ ಹೇಳಿಕೊಂಡಿರುವ ವನಿತಾ, 'ಈಗಷ್ಟೇ ಮದುವೆ ಮುಗಿದಿದೆ. ಸರಳವಾಗಿ ಮದುವೆಯಾಗಬೇಕು ಎಂಬ ಆಸೆ ಇತ್ತು. ಅದರಂತೆ ಸರಳವಾಗಿ ಮದುವೆಯಾಗಿದ್ದೇವೆ. ಇನ್ನು ಈ ತರಹ ಗಲಾಟೆ ಆಗಬಹುದು ಎಂದು ನಾನು ಮತ್ತು ಪೀಟರ್, ನಿರೀಕ್ಷೆ ಮಾಡಿದ್ದೆವು. ಅದರಂತೆ ಆಗಿದೆ. ಇದನ್ನು ನಾವು ನ್ಯಾಯಯುತವಾಗಿಯೇ ಹೋರಾಡುತ್ತೇವೆ' ಎಂದು ವನಿತಾ ಹೇಳಿಕೊಂಡಿದ್ದಾರೆ.