ಕರೆಂಟ್​ ಬಿಲ್​ ನೋಡಿ ಶಾಕ್​ ಆದ ತಾಪ್ಸಿ ಪನ್ನು!

Tapsee - Final
Published on

ತಾಪ್ಸಿ ಪನ್ನು ಶಾಕ್​ ಆಗಿದ್ದಾರೆ. ಕಳೆದ ಮೂರು ತಿಂಗಳುಗಳಲ್ಲಿ ಬಾಲಿವುಡ್​ನಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಈ ಬಗ್ಗೆ ಹೆಚ್ಚು ಮಾತನಾಡದೆ ದೂರ ಉಳಿದಿದ್ದ ತಾಪ್ಸಿ, ಇದೀಗ ಬಹಳ ದಿನಗಳ ನಂತರ ಶಾಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟಕ್ಕೂ ಅವರು ಶಾಕ್​ ಆಗುವುದಕ್ಕೆ ಕಾರಣವೇನು ಗೊತ್ತಾ? ಕಳೆದ ತಿಂಗಳ ಕರೆಂಟ್​ ಬಿಲ್​.

ತಾಪ್ಸಿ ಪನ್ನು ಮನೆಗೆ ಕಳೆದ ತಿಂಗಳ ಕರೆಂಟ್​ ಬಿಲ್​ ಬಂದಿದೆ. ಅದನ್ನು ನೋಡಿ ಅವರು ದಿಗ್ಭ್ರಾಂತರಾಗಿದ್ದಾರೆ. ಅದಕ್ಕೆ ಕಾರಣ, ಅವರಿಗೆ 36 ಸಾವಿರದ ಬಿಲ್​ ಬಂದಿರುವುದು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಏಪ್ರಿಲ್​ ತಿಂಗಳಿಗೆ 4390 ಬಿಲ್​ ಬಂದಿತ್ತು. ಮೇ ತಿಂಗಳಲ್ಲಿ 3850 ರೂಪಾಯಿಗಳ ಬಿಲ್​ ಬಂದಿತ್ತು. ಜೂನ್​ ತಿಂಗಳು ನೋಡಿದರೆ 36 ಸಾವಿರದ ಬಿಲ್​ ಬಂದಿದೆ ಎಂದು ಗಾಬರಿ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳ ಲಾಕ್​ಡೌನ್​ನಲ್ಲಿ ನಾನು ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಹಾಗಂತ ಹೆಚ್ಚು ವಿದ್ಯುತ್​ ಸಹ ಬಳಸಿಲ್ಲ. ಆದರೂ ಇಷ್ಟೊಂದು ಏರಿಕೆ ಆಗಿರುವುದಕ್ಕ ಹೇಗೆ ಸಾಧ್ಯ? ಇದು ಈಗಿರುವ ಬಿಲ್​ನ ಕಥೆಯಾದರೆ, ನನ್ನ ಇನ್ನೊಂದು ಮನೆಯಲ್ಲಿ ಯಾರೂ ವಾಸವಿಲ್ಲ. ವಾರಕ್ಕೊಂದು ದಿವಸ ಅಲ್ಲಿಗೆ ಹೋಗಿ ಕ್ಲೀನ್​ ಮಾಡಿ ಬರುವುದು ಬಿಟ್ಟರೆ, ಮಿಕ್ಕಂತೆ ಅಲ್ಲಿ ಯಾರೂ ವಾಸವಿಲ್ಲ. ಆದರೂ ಆ ಮನೆಯದ್ದೂ ದೊಡ್ಡ ಬಿಲ್​ ಬಂದಿದೆ. ಇಷ್ಟು ದೊಡ್ಡ ಬಿಲ್​ ನೋಡಿ, ನಮಗೆ ಗೊತ್ತಿಲ್ಲದೆಯೇ ಅಲ್ಲಿ ಯಾರಾದರೂ ವಾಸ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಜೋಕ್​ ಮಾಡಿದ್ದಾರೆ.

ಬರೀ ತಾಪ್ಸಿ ಪನ್ನು ಮಾತ್ರವಲ್ಲ, ಹಲವು ಬಾಲಿವುಡ್​ ಸೆಲೆಬ್ರಿಟಿಗಳಿಗೆ ಇದೇ ರೀತಿಯ ಅನುಭವವಾಗಿದೆ. ಪ್ರಮುಖವಾಗಿ ಡಿನೋ ಮೊರಿಯಾ, ಅಲಿ ಫಜಲ್​, ವೀರ್​ ದಾಸ್​ ಮುಂತಾದವರಿಗೆ ಒಂದು ತಿಂಗಳಿಗೆ 30, 40 ಸಾವಿರ ರೂಪಾಯಿಗಳ ಬಿಲ್​ ಬಂದಿದೆ. ಅದನ್ನು ನೋಡಿ ಶಾಕ್​ ಆಗಿರುವ ಅವರು, ಸೋಷಿಯಲ್​ ಮೀಡಿಯಾದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net