More

    ಫ್ಯಾಮಿಲಿ ಮಾತು ಹೊಸ ಚಿತ್ರದ ಬಗ್ಗೆ ಅಮೃತ ಮಂಥನ

    ಬೆಂಗಳೂರು: ಈ ವರ್ಷದ ಆರಂಭದಲ್ಲಿ ಒಂದೇ ತಿಂಗಳ ಅಂತರದಲ್ಲಿ ಅಮೃತಾ ಅಯ್ಯಂಗಾರ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಇಷ್ಟರಲ್ಲಿ ಇನ್ನೊಂದೆರೆಡು ಚಿತ್ರಗಳು ಬಿಡುಗಡೆಯಾಗುತ್ತಿದ್ದವೇನೋ? ಜತೆಗೆ, ಅಮೃತಾ ಅಭಿನಯದ ಇನ್ನೊಂದಿಷ್ಟು ಚಿತ್ರಗಳು ಶುರುವಾಗುತಿತ್ತೇನೋ? ಆದರೆ, ಅದೆಲ್ಲಕ್ಕೂ ಲಾಕ್​ಡೌನ್ ಬ್ರೇಕ್ ಹಾಕಿತು. ಈಗ ಲಾಕ್​ಡೌನ್​ಗೂ ಬ್ರೇಕ್ ಬೀಳುತ್ತಿದ್ದಂತೆ, ‘ಫ್ಯಾಮಿಲಿ ಪ್ಯಾಕ್’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಅವರು ಸಜ್ಜಾಗಿದ್ದಾರೆ.

    ‘ಫ್ಯಾಮಿಲಿ ಪ್ಯಾಕ್’, ಪುನೀತ್ ನಿರ್ವಣದ ಹೊಸ ಸಿನಿಮಾ. ಲಿಖಿತ್ ಶೆಟ್ಟಿ ನಾಯಕ. ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗಿರುವ ಅವರು, ‘ಇದುವರೆಗೂ ನಾನು ಬೋಲ್ಡ್ ಪಾತ್ರಗಳನ್ನು ಮಾಡಿದ್ದೇ ಹೆಚ್ಚು. ಇದೊಂದು ರೊಮ್ಯಾಟಿಕ್ ಕಾಮಿಡಿ. ಕಥೆ ಬಹಳ ಕ್ಯಾಚಿಯಾಗಿತ್ತು. ನಾನು ಈ ತರಹ ಚಿತ್ರ ಮಾಡಿರಲಿಲ್ಲ. ಅದೇ ಕಾರಣಕ್ಕೆ ಒಪ್ಪಿದೆ’ ಎನ್ನುತ್ತಾರೆ ಅಮೃತಾ. ಇನ್ನು ಪುನೀತ್ ನಿರ್ವಣದ ಸಿನಿಮಾ ಎಂಬ ಕಾರಣಕ್ಕೂ ಅವರು ಎಸ್ ಅಂದರಂತೆ. ‘ಈಗ ಎಲ್ಲಾ ಕಡೆ ಸ್ವಜನಪಕ್ಷಪಾತದ ಬಗ್ಗೆ ಮಾತು ಕೇಳಿ ಬರುತ್ತಿದೆ. ಆದರೆ, ಪುನೀತ್ ಅವರು ಹೊಸಬರು ಬರಬೇಕು, ಚಿತ್ರರಂಗ ಬೆಳೆಯಬೇಕು ಎಂದು ಹಲವು ಹೊಸಬರಿಗೆ ಅವಕಾಶ ಕೊಡುತ್ತಿದ್ದಾರೆ. ಬರೀ ಈ ಸಿನಿಮಾ ಅಷ್ಟೇ ಅಲ್ಲ, ಅವರ ಎಲ್ಲಾ ಸಿನಿಮಾಗಳಲ್ಲೂ ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು ಖುಷಿಯಾಗುತ್ತಾರೆ ಅಮೃತಾ.

    ಇದನ್ನೂ ಓದಿ: ಕಂಬ್ಯಾಕ್ ಕಾತರದಲ್ಲಿ ಮಾನ್ಯಾ

    ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಚಿತ್ರೀಕರಣ ಆಷಾಢ ಮುಗಿದ ಮೇಲೆ ಶುರುವಾಗುತ್ತದಂತೆ. ಬಹುತೇಕ ಬೆಂಗಳೂರು ಸುತ್ತಮುತ್ತಲೇ ಚಿತ್ರೀಕರಣ ನಡೆಯಲಿದೆ. ಇದಲ್ಲದೆ ‘ಬಡವ ರ್ಯಾಸ್ಕಲ್’ ಮತ್ತು ‘ವಿಂಡೋ ಸೀಟ್’ ಚಿತ್ರಗಳಲ್ಲಿ ಅಮೃತಾ ನಟಿಸಿದ್ದು, ಈ ಪೈಕಿ ಧನಂಜಯ್ ಅಭಿನಯದ ‘ಬಡವ ರ್ಯಾಸ್ಕಲ್’ ಬಹುತೇಕ ಮುಗಿದಿದ್ದರೆ, ನಿರೂಪ್ ಭಂಡಾರಿ ಜತೆಗಿನ ‘ವಿಂಡೋ ಸೀಟ್’ ಬಿಡುಗಡೆಗೆ ಸಿದ್ಧವಾಗಿದೆ.

    ಸಮಸ್ಯೆ ಇದ್ದರೆ ಹಂಚಿಕೊಳ್ಳಿ: ದೇಶದಲ್ಲೆಲ್ಲಾ ಸುಶಾಂತ್ ಸಿಂಗ್ ರಜಪೂತ್ ಸಾವಿನ ಚರ್ಚೆಯಾಗುತ್ತಿದೆ. ಈ ಕುರಿತು ಮಾತನಾಡುವ ಅಮೃತಾ, ‘ನಾನು ಸಹ ಒಬ್ಬ ಸೈಕಾಲಜಿ ವಿದ್ಯಾರ್ಥಿ. ನಾನು ಗಮನಿಸಿರುವಂತೆ ಮಾನಸಿಕ ಸ್ವಾಸ್ಥ್ಯಕ್ಕೆ ನಮ್ಮ ದೇಶದಲ್ಲಿ ಪ್ರಾಮುಖ್ಯತೆಯೇ ಕೊಡುವುದಿಲ್ಲ. ಈ ತರಹ ಆದಾಗ ಎಲ್ಲರೂ ಮಾತಾಡುತ್ತಾರೆ. ಮಿಕ್ಕಂತೆ ಯಾರೂ ಮಾತನಾಡುವುದಿಲ್ಲ. ಯಾರಿಗೇ ಆಗಲಿ ಸಮಸ್ಯೆ ಇದ್ದರೆ ಅದನ್ನು ಹಂಚಿಕೊಂಡು, ಬಗೆಹರಿಸಿಕೊಳ್ಳಬೇಕು’ ಎನ್ನುತ್ತಾರೆ ಅಮೃತಾ.

    ನಮ್ಮ ಬೇರುಗಳೇ ಶಾಶ್ವತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts