ನಮ್ಮ ಬೇರುಗಳೇ ಶಾಶ್ವತ...

darshan jan 13
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿನಿಮಾದಲ್ಲಿ ಹೆಚ್ಚು ತೊಡಗಿಸಿಕೊಂಡರೂ, ಅವರ ಮನಸ್ಸು ಮಾತ್ರ ಕೃಷಿಯತ್ತ ನೆಟ್ಟಿರುತ್ತದೆ. ಸಾಕುಪ್ರಾಣಿಗಳು, ತೋಟ, ಕೃಷಿ ಎಂದೆಲ್ಲ ಬಿಡುವಿನ ಹೊತ್ತಲ್ಲಿ ಫಾರ್ಮ್​​ಹೌಸ್​ನಲ್ಲಿಯೇ ಕಾಲಕಳೆಯುತ್ತಾರೆ.

ಇದೀಗ ಇದೇ ದರ್ಶನ್, ಕರೊನಾ ಹಿನ್ನೆಲೆಯಲ್ಲಿ ಬದಲಾದ ಯುವಸಮೂಹದ ಮನಸ್ಥಿತಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ‘ಊರು ತೊರೆದು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ ಯುವಕರು, ಇದೀಗ ತಮ್ಮೂರಿಗೆ ತೆರಳಿ ಜಮೀನು ಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಗೊತ್ತಾಗಿದ್ದೇನೆಂದರೆ, ಪ್ರತಿ ಮನುಷ್ಯನಿಗೆ ಮೊದಲು ಮೂರು ಹೊತ್ತು ಊಟ ಬೇಕು ಎಂಬುದು. ಅದನ್ನು ಈ ಹೊತ್ತಲ್ಲಿ ತುಂಬ ಜನ ತಿಳಿದುಕೊಂಡರು. ಕೃಷಿಯ ಮಹತ್ವವನ್ನೂ ಅರಿತರು.

ಯುವಕರು ಪುನಃ ಬೇರಿನತ್ತ ಮುಖಮಾಡಿದ್ದು ನನಗೆ ಖುಷಿಕೊಟ್ಟಿದೆ. ಆ ಬೇರುಗಳೇ ಶಾಶ್ವತ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗಾಗಲೇ ‘ರಾಬರ್ಟ್’ ಸಿನಿಮಾ ಬಿಡುಗಡೆಯಾಗಿರಬೇಕಿತ್ತು. ‘ರಾಜವೀರ ಮದಕರಿ ನಾಯಕ’ ಚಿತ್ರದ ಶೂಟಿಂಗ್ ಸಹ ಶುರುವಾಗಬೇಕಿತ್ತು. ಆದರೆ, ಅದೆಲ್ಲದಕ್ಕೂ ಕರೊನಾ ಅಡ್ಡಿಯಾಗಿದ್ದರಿಂದ, ಪರಿಸ್ಥಿತಿ ಸುಧಾರಿಸಿದ ಬಳಿಕ ಏನೆಂಬುದನ್ನು ತಿಳಿಸಲಿದ್ದಾರೆ ದರ್ಶನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net