ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !

Coronil Kit
Published on

ನವದೆಹಲಿ: ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿದ ಕೊವಿಡ್​-19 ನಿವಾರಕ ಔಷಧಿ ಕರೊನಿಲ್​​ ಮಾರಾಟಕ್ಕೆ ಆಯುಷ್​ ಸಚಿವಾಲಯ ತಡೆ ಹಿಡಿದಿದೆ. ಔಷಧಿಯ ಕ್ಲಿನಿಕಲ್ ಪ್ರಯೋಗದ ಸಂಪೂರ್ಣ ದಾಖಲೆ ನೀಡಲು ಸೂಚಿಸಿದೆ.

ಕರೊನಲ್ ಬಿಡುಗಡೆಯಾದಾಗಿನಿಂದಲೂ ವಿವಾದ ನಡೆಯುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕರೊನಿಲ್​ನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿದ ಬಗ್ಗೆ, ಅದನ್ನು ಸದ್ಯ ತಡೆಹಿಡಿದ ಬಗ್ಗೆ ಏನೇನೋ ಊಹಾಪೋಹಗಳು, ಇಲ್ಲಸಲ್ಲದ ವಿಚಾರಗಳು ವೈರಲ್​ ಆಗುತ್ತಲೇ ಇವೆ.

ಅದೆಲ್ಲದರ ಮಧ್ಯೆ ಕರೊನಿಲ್​ ಆಯುರ್ವೇದ ಔಷಧಿಗೆ ತಡೆ ಹಿಡಿಯಲು ಕಾರಣ ಆಯುಷ್​ ಇಲಾಖೆಯಲ್ಲಿರುವ ಮುಸ್ಲಿಂ ಸದಸ್ಯರು ಎಂಬ ಒಂದು ಪೊಸ್ಟ್​ ಫೇಸ್​ಬುಕ್​, ಟ್ವಿಟರ್​​ಗಳಲ್ಲಿ ಹರಿದಾಡುತ್ತಿದೆ. ಆಯುಷ್​ ಇಲಾಖೆಯಲ್ಲಿ ಔಷಧಿಗಳ ಅನುಮೋದನೆಗೆ ಸಂಬಂಧಪಟ್ಟಂತೆ ಇರುವ ತಜ್ಞರ ಸಮಿತಿಯಲ್ಲಿ ಆರು ಮಂದಿ ಮುಸ್ಲಿಮರಿದ್ದಾರೆ. ಹಾಗಾಗಿ ಆಯುರ್ವೇದ ಔಷಧಿ ಕರೊನಿಲ್​ಗೆ ಅನುಮತಿ ಸಿಕ್ಕಿಲ್ಲ. ಅದನ್ನು ತಡೆಹಿಡಿಯಲಾಗಿದೆ ಎಂಬ ಪೋಸ್ಟ್​ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಲವರ್​ ಜತೆ ಸೇರಿ ಪತಿ ಕೊಂದ ಪತ್ನಿ: ದೃಶ್ಯಂ ಸಿನಿಮಾದಂತೆ ಮುಚ್ಚಿ ಹಾಕಲು ಯತ್ನಿಸಿ ಸಿಕ್ಕಿ ಬಿದ್ದಿದ್ಹೇಗೆ?​

ಟ್ವಿಟರ್​​ನಲ್ಲೂ ಕೂಡ ಇದೇ ಪೋಸ್ಟ್​ಗಳು ಹಿಂದಿಯಲ್ಲಿ ವೈರಲ್​ ಆಗುತ್ತಿವೆ. ಹಾಗೇ, ತಜ್ಞರ ಸಮಿತಿಯಲ್ಲಿ ಇದ್ದಾರೆ ಎನ್ನಲಾದ ಮುಸ್ಲಿಂ ಮುಖಂಡರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಸೀಂ ಖಾನ್​, ಮುನ್ವರ್​ ಖಾಜ್ಮಿ, ಖದೀರನ್​ ನಿಸಾ, ಮಕ್ಬೂಲ್​ ಅಹ್ಮದ್​ ಖಾನ್​, ಅಸಿಯಾ ಖಾನಮ್​, ಶಾಗುಪ್ತಾ ಫರ್ವೀನ್​ ಅವರು ಆಯುಷ್​ ಇಲಾಖೆಯ ಔಷಧಿ ಸಂಶೋಧನೆ ಮತ್ತು ಅನುಮೋದನಾ ತಜ್ಞಸಮಿತಿಯಲ್ಲಿರುವವರು. ಈಗ ನಿಮಗೆಲ್ಲ ಅರ್ಥ ಆಗಿರಬಹುದು, ಬಾಬಾ ರಾಮ್​ದೇವ್​ ಅವರ ಕರೊನಿಲ್ ಆಯುರ್ವೇದ ಔಷಧಿ ಯಾಕೆ ತಡೆಹಿಡಿಯಲ್ಪಟ್ಟಿದೆ ಎಂಬುದು. ಇದೊಂದು ವ್ಯೂವಾಹತ್ಮಕ ಜಿಹಾದ್​ ಅಲ್ಲವೇ? ಎಂದು ವೈರಲ್​ ಆದ ಪೋಸ್ಟ್​ನಲ್ಲಿ ಬರೆಯಲಾಗಿದೆ. ಈ ಪೋಸ್ಟ್​ ಹಲವು ಬಾರಿ ಶೇರ್​ ಆಗಿದೆ. ಇದನ್ನೂ ಓದಿ:ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್​ ಗಾಂಧಿ

ಆದರೆ ಇದೊಂದು ಶುದ್ಧ ಸುಳ್ಳು ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ಪತ್ತೆಹಚ್ಚಿದೆ. ಹೀಗೆ ವೈರಲ್​ ಆಗಿರುವ ಮುಸ್ಲಿಂ ಹೆಸರುಗಳು ಆಯುಷ್​ ಇಲಾಖೆಯ ತಜ್ಞ ಸಮಿತಿಯಲ್ಲಿ ಇರುವವರದ್ದಲ್ಲ. ಆಯುರ್ವೇದಿಕ್​ ಔಷಧಿಗೆ ಅನುಮೋದನೆ ನೀಡಲು ಪರವಾನಗಿ ಪಡೆದವರದ್ದೂ ಅಲ್ಲ ಎಂಬುದು ಸಾಬೀತಾಗಿದೆ.

ಹಾಗೇ..ಈ ಎಲ್ಲ ಹೆಸರುಗಳೂ ಇರುವುದು ಯುನಾನಿ ಮೆಡಿಸಿನ್​ ಡಿಪಾರ್ಟ್​ಮೆಂಟ್​​ನ ವೆಬ್​ಸೈಟ್​ನಲ್ಲಿ. ಆಯುಷ್​ ಇಲಾಖೆಯ ಆಯುರ್ವೇದ ವಿಭಾಗಕ್ಕೂ, ಈ ಹೆಸರುಗಳಿಗೂ ಸಂಬಂಧವಿಲ್ಲ ಎಂದು ಫ್ಯಾಕ್ಟ್​ಚೆಕ್​ನಿಂದ ಗೊತ್ತಾಗಿದೆ.

ಈ ಬಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಆಲ್ ಇಂಡಿಯಾ ಆಯುರ್ವೇದಿಕ್​ ಕಾಂಗ್ರೆಸ್​ನ ಅಧ್ಯಕ್ಷ ದೇವೇಂದ್ರ ತ್ರಿಗುಣಾ ಅವರು ಪ್ರತಿಕ್ರಿಯೆ ನೀಡಿದ್ದು, ಆಯುರ್ವೇದ ಔಷಧಿಗಳಿಗೆ ಆಯಾ ರಾಜ್ಯಗಳಲ್ಲಿರುವ ಆಯುಷ್​ ಇಲಾಖೆಗಳೇ ಪರವಾನಗಿ ನೀಡುತ್ತಿವೆ. ತಜ್ಞರ ಸಮಿತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ‘ಮನೆಯ ಕಿಟಕಿ ಮುಚ್ಚಿರಲಿ…ಪಾತ್ರೆ, ಡ್ರಮ್​​ಗಳನ್ನು ಬಡಿಯಿರಿ…’: ಈ ಸಲಹೆ ಯಾಕೆ ಗೊತ್ತಾ?

ಇನ್ನು ಯುನಾನಿ ಮೆಡಿಸಿನ್​ ಡಿಪಾರ್ಟ್​ಮೆಂಟ್​ನ ವೆಬ್​ಸೈಟ್​ಗೆ(https://ccrum.res.in/UserView/index?mid=1424 ) ಭೇಟಿ ನೀಡಿದರೆ, ಮೇಲಿರುವ ಎಲ್ಲ ಹೆಸರುಗಳನ್ನೂ ಕಾಣಬಹುದು. ಇವರೆಲ್ಲರೂ ಕಾರ್ಯ ನಿರ್ವಹಿಸುತ್ತಿರುವುದು ಆಯುಷ್​ ಇಲಾಖೆಗೆ ಯುನಾನಿ ಔಷಧಿ ಪದ್ಧತಿ ವಿಭಾಗದಲ್ಲಿ ಎಂಬುದು ಸಾಬೀತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net