ಕ್ವಾರಂಟೈನ್ ಬಗ್ಗೆ ಪ್ರಿಯಾಂಕಾ ಹೇಳಿರೋದೇನು?

Priyanka Chopra Final
Published on

ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ಮುಂಚೂಣಿಯಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ, ಲಾಕ್​ಡೌನ್ ಶುರುವಾದಾಗಿನಿಂದ ಅಮೆರಿಕಾದ ಲಾಸ್ ಏಂಜಲಸ್​ನಲ್ಲಿ ಲಾಕ್ ಆಗಿದ್ದಾರೆ. ಪತಿ ಮತ್ತವರ ಕುಟುಂಬದ ಜತೆಗೆ ಕಾಲಕಳೆಯುತ್ತಿದ್ದಾರೆ. ಹೀಗಿರುವಾಗಲೇ ಇದೇ ಪ್ರಿಯಾಂಕಾ, ಆ ಸುದೀರ್ಘ ಅವಧಿಯ ಕ್ವಾರಂಟೈನ್ ಅನುಭವವನ್ನು ಹೇಳಿಕೊಂಡಿದ್ದಾರೆ. ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಕೋವಿಡ್ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯರಿಗೂ ಸಲಾಮ್ ಎಂದಿದ್ದಾರೆ.

‘ಕ್ವಾರಂಟೈನ್ ನನ್ನ ಪಾಲಿಗೆ ತುಂಬ ವಿಶೇಷವಾಗಿತ್ತು. ಅಷ್ಟೇ ವಿನಮ್ರವಾಗಿತ್ತು. ಅಂದಹಾಗೆ, ನಾನು ಭಾರತದಿಂದ ಬಂದವಳು. ಸುದ್ದಿಮಾಧ್ಯಮಗಳಲ್ಲಿ ಕೋವಿಡ್ ಸಂಬಂಧಿ ಸುದ್ದಿಯನ್ನು ಗಮನಿಸಿದ್ದೇನೆ. ಹಸಿವಿನಿಂದ ಜನ ಸಾವನ್ನಪು್ಪತ್ತಿರುವುದನ್ನು ನೋಡಿ ಬೇಸರವಾಗಿದೆ. ಕೋವಿಡ್​ನಿಂದಾಗಿ ನಾನು ನಮ್ಮವರ ಜತೆ ಎಷ್ಟೊಂದು ಸುರಕ್ಷಿತವಾಗಿದ್ದೇನೆ ಎಂಬುದೂ ನನಗೆ ಅರಿವಾಗಿದೆ. ಅರಿತಿದ್ದೇನೆ. ನನಗೆ ಕ್ವಾರಂಟೈನ್ ಆಗಲು ಸುಸಜ್ಜಿತ ಮನೆಯಾದರೂ ಇದೆ. ಇನ್ನು ಕೆಲವರಿಗೆ ಮನೆಯೇ ಇಲ್ಲ. ಪತಿ ಮತ್ತು ಮತ್ತವರ ಕುಟುಂಬದೊಟ್ಟಿಗೆ ಧೈರ್ಯವಾಗಿ ನಾನು ಇರಬಲ್ಲೇ ಎಂಬ ಸಾಮರ್ಥ್ಯವೂ ನನಗಿದೆ. ವೈದ್ಯಕೀಯ ಸಮುದಾಯ ಕರೊನಾ ವಿರುದ್ಧ ಹೋರಾಡುತ್ತಿರುವುದು ನಿಜಕ್ಕೂ ಮೆಚ್ಚುವಂಥ ಕಾರ್ಯ. ಇನ್ನುಳಿದಂತೆ ವಿಜ್ಞಾನಿಗಳಿಗೆ, ಕರೊನಾ ವಿರುದ್ಧ ಸೇವೆಯಲ್ಲಿರುವ ಸ್ವಯಂ ಸೇವಕರಿಗೂ ನಮ್ಮ ಸಲಾಮ್ ಎಂದು ಕ್ವಾರಂಟೈನ್ ಅನುಭವಗಳನ್ನು ಹೇಳಿಕೊಂಡಿದ್ದಾರೆ ಪ್ರಿಯಾಂಕಾ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net