

ರಾಕಿಂಗ್ ಸ್ಟಾರ್ ಯಶ್ ಕಳೆದ ಮೂರು ತಿಂಗಳಿಂದ ಲಾಕ್ಡೌನ್ನಲ್ಲಿದ್ದಾರೆ. ಸಿನಿಮಾ ಶೂಟಿಂಗ್ ಬದಿಗಿಟ್ಟು, ಮಡದಿ ಮತ್ತು ಮುದ್ದಾದ ಮಕ್ಕಳೊಂದಿಗೆ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಪ್ಲೋಡ್ ಮಾಡುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಆದರೂ, ಯಶ್ ಕಡೆಯಿಂದ ಸರಣಿ ಪೋಸ್ಟ್ಗಳನ್ನು ನಿರೀಕ್ಷಿಸುವುದು ತುಂಬ ಕಡಿಮೆ. ಜಾಲತಾಣದಲ್ಲಿ ಏನಾದರೊಂದು ಪೋಸ್ಟ್ ಮಾಡುತ್ತಾರೆಂದರೆ ಅದರ ಹಿಂದೆ ಏನಾದರೊಂದು ಬಲವಾದ ಕಾರಣ ಇದ್ದೇ ಇರುತ್ತದೆ. ಅದೇ ರೀತಿ ಭಾನುವಾರವೂ ಯಶ್ ಕಡೆಯಿಂದ ಫೋಟೋವೊಂದು ಫೇಸ್ಬುಕ್ನಲ್ಲಿ ಅಪ್ಲೋಡ್ ಆಗಿದೆ.
ಇದನ್ನೂ ಓದಿ: ಕಂಬ್ಯಾಕ್ ಕಾತರದಲ್ಲಿ ಮಾನ್ಯಾ
ಹೌದು, ಪತ್ನಿ ರಾಧಿಕಾ ಜತೆಗಿರುವ ಫೋಟೋ ಶೇರ್ ಮಾಡಿಕೊಂಡ ಯಶ್, ಜಾರಿಯಲ್ಲಿರುವ ಲಾಕ್ಡೌನ್ ಪತ್ನಿ ಸ್ನೇಹಿಯಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ‘ಕರ್ನಾಟಕ ಸರ್ಕಾರ ಲಾಕ್ಡೌನ್ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಯಾಕೆ ಎಂಬುದೇ ತಿಳಿಯುತ್ತಿಲ್ಲ. ರಾತ್ರಿ 8ಕ್ಕೆ ಮನೆಗೆ ಬಾ, ವಾರಾಂತ್ಯಕ್ಕೆ ಮನೆಯಲ್ಲಿಯೇ ಠಿಕಾಣಿ! ಏನೇ ಹೇಳಿ ಇದೊಂದು ರೀತಿ ಪತ್ನಿ ಸ್ನೇಹಿಯಾಗಿದೆ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ’ ಎಂದಿದ್ದಾರೆ.
ಇನ್ನು ಯಶ್ ಈ ಫೋಟೋ ಹಾಕುತ್ತಿದ್ದಂತೆ, ಅವರ ಕಮೆಂಟ್ ಬಾಕ್ಸ್ನಲ್ಲಿ ಒಂದಷ್ಟು ಹಾಸ್ಯಮಯ ಸಂದೇಶಗಳೂ ಕಾಣಿಸಿವೆ. ಫೋಟೋದಲ್ಲಿ ಮೂರು ಬೆರಳುಗಳನ್ನು ಹಣೆಗಿಟ್ಟುಕೊಂಡಿದ್ದಕ್ಕೆ, ‘ಸರ್ ನೀವು ನೀಡುತ್ತಿರುವ ಸಿಂಬಾಲ್ ಹಿಂದಿನ ಮರ್ಮವೇನು?’ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ‘ಎನಿ ಗುಡ್ ನ್ಯೂಸ್’ ಎಂಬ ಅರ್ಥದಲ್ಲಿ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಯಶ್ ಯಾವುದೇ ಪೋಸ್ಟ್ ಹಾಕಿದರೂ ಅದಕ್ಕೆ ಒಂದಲ್ಲ ಒಂದು ರೀತಿ ಕಮೆಂಟ್ಗಳು ಬರುತ್ತಲೇ ಇರುತ್ತವೆ. ಒಂದು ವೇಳೆ ಅದು ನಿಜವೇ ಆಗಿದ್ದರೆ, ಸ್ವತಃ ಯಶ್ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.