ಗಂಗೊಳ್ಳಿ: ಗಿಡ ನೆಡುವುದು ಮಾತ್ರವಲ್ಲ ಅದನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್ ಕೋಡಿ ಹೇಳಿದರು.
ಬಗ್ವಾಡಿಯಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಕೋಟ, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಹೆಮ್ಮಾಡಿ, ಮಹಿಷಾಸುರಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಸಹಕಾರದೊಂದಿಗೆ ಶುಕ್ರವಾರ ವನಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಮ್ಮಾಡಿ ಘಟಕ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ಘಟಕ ಉಸ್ತುವಾರಿ ಹಾಗೂ ಜಿಲ್ಲಾ ಸಂಘಟನೆ ಉಪಾಧ್ಯಕ್ಷ ರವೀಶ್ ಕೊರವಡಿ, ಮಹಿಷಾಸುರಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಅಧ್ಯಕ್ಷೆ ಶ್ಯಾಮಲಾ ಚಂದನ್ ಉಪಸ್ಥಿತರಿದ್ದರು.
ಘಟಕ ಗೌರವಾಧ್ಯಕ್ಷ ಲೋಹಿತಾಶ್ವ ಆರ್.ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ ನೆಂಪು ವಂದಿಸಿದರು. ಸ್ತ್ರೀಶಕ್ತಿ ಸದಸ್ಯೆ ಗಿರಿಜಾ ಪ್ರಾರ್ಥಿಸಿದರು. ಘಟಕ ನಿಕಟ ಪೂರ್ವ ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ ನಿರೂಪಿಸಿದರು.