ಹೆಬ್ರಿ: ಹೆಬ್ರಿ ಗ್ರಾಮೀಣ ಪ್ರದೇಶದ ಮುದ್ರಾಡಿಯು ಕರ್ಮಯೋಗಿಯ ಕ್ಷೇತ್ರ. ದೇವಿಯ ಆರಾಧನೆ ಜತೆಗೆ ಧರ್ಮ ಕಲೆಗೆ ಮುದ್ರಾಡಿಯ ಸಂಘಟನೆ ಕೊಡುಗೆ ಅಪಾರವಾದುದು ಎಂದು ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹೇಳಿದರು.
ಗುರುವಾರ ಹೆಬ್ರಿಯ ಮುದ್ರಾಡಿ ಶ್ರೀಕ್ಷೇತ್ರ ಅಭಯಹಸ್ತೆ ಆದಿಶಕ್ತಿ ಹಾಗೂ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಧರ್ಮಯೋಗಿ ಮೋಹನ್ ಸ್ವಾಮೀಜಿ 3ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಧರ್ಮಯೋಗಿ ಸಮ್ಮಾನ್ ಸ್ವೀಕರಿಸಿ ಮಾತನಾಡಿದರು.
ಉದ್ಯಮಿ ಯೋಗಿಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್ ಮೋಹನ್ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರ ಮುದ್ರಾಡಿಯ ಕಮಲಾ ಎಂ.ಪಿ., ಮುದ್ರಾಡಿ ಗ್ರಾಪಂ ಸದಸ್ಯ ಗಣಪತಿ ಮುದ್ರಾಡಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಗದೀಶ್ ಜಾಲ, ಹಿರಿಯರಾದ ವರಂಗದ ವಿಠ್ಠಲ ಪೂಜಾರಿ, ಉಡುಪಿಯ ಎಸ್.ಟಿ.ಕುಂದರ್, ಧರ್ಮದರ್ಶಿಗಳಾದ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಉಪಸ್ಥಿತರಿದ್ದರು.