ಪಣಪಿಲ ಶಾಲೆಯಲ್ಲಿ ಬೀಜದುಂಡೆ ಬಿತ್ತನೆ

New Project (50)
Published on

ಮೂಡುಬಿದಿರೆ: ಪಣಪಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವನಮಹೋತ್ಸವ ಹಾಗೂ ಬೀಜದುಂಡೆ ಬಿತ್ತನೆ ಕಾರ್ಯಕ್ರಮ ನಡೆಯಿತು.

ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ನೆಲ್ಲಿಕಾರು-ಪಣಪಿಲ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪವಲಯ ಅರಣ್ಯಾಧಿಕಾರಿ ಬಸಪ್ಪ ಹಲಗೇರ ಅರಣ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹರೀಶ ಆಚಾರ್ಯ, ದರೆಗುಡ್ಡೆ ಗ್ರಾಪಂ ಸದಸ್ಯರಾದ ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ, ಎಸ್ ಡಿಎಂಸಿ ಅಧ್ಯಕ್ಷ ರವಿ ಪೂಜಾರಿ, ಮುಖ್ಯಶಿಕ್ಷಕ ಅನಂತ, ಬಿಜೆಪಿ ಮುಖಂಡ ಅಶ್ವತ್ ಪಣಪಿಲ, ಗಸ್ತು ಅರಣ್ಯ ಪಾಲಕ ಮಂಜುನಾಥ ಮಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net