ಸ್ಕೂಟರ್​ನಲ್ಲಿ ಮೊಸಳೆಯನ್ನು ಹೊತ್ತೊಯ್ದ ಯುವಕರು; ಇವರ ಸಾಹಸದ ವಿಡಿಯೋ ವೈರಲ್​

Crocodile
Published on

ವಡೋದರಾ: ಆಗಸ್ಟ್​ ತಿಂಗಳ ಅಂತ್ಯದಲ್ಲಿ ಗುಜರಾತ್​ನ ವಡೋದರಾದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ 40ಕ್ಕೂ ಹೆಚ್ಚು ಮಸಳೆಗಳನ್ನು  ಜನವಸತಿ ಪ್ರದೇಶದಿಂದ ರಕ್ಷಿಸಲಾಗಿದ್ದು, ಅಧಿಕಾರಿಗಳು ಪುನರ್ವಸತಿ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ನಿರಂತರ ಮಳೆಯಿಂದಾಗಿ ಹೈರಾಣಾಗಿದ್ದ ವಡೋದರಾ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಮೊಸಳೆಗಳು ಮತ್ತು ಇತರ ಪ್ರಾಣಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಮತ್ತು ಎನ್‌ಜಿಒಗಳ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.

ರಕ್ಷಣಾ ಕಾರ್ಯಾಚರಣೆಯ ಜೊತೆಗೆ ಇದೀಗ ವ್ಯಕ್ತಿಗಳಿಬ್ಬರು ಸ್ಕೂಟರ್​ನಲ್ಲಿ ಮೊಸಳೆಯನ್ನು ಸಾಗಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಇವರ ದೈರ್ಯವನ್ನು ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋವನ್ನು ನೋಡುವುದಾದರೆ ಸಂದೀಪ್ ಠಾಕೂರ್ ಮತ್ತು ರಾಜ್ ಭಾವಸರ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಸ್ಕೂಟರ್​ನಲ್ಲಿ ಮೊಸಳೆಯನ್ನು ಹಿಡಿದು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಇದಾದ ಬಳಿಕ ಅವರು ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿ ಹಸ್ತಾಂತರಿಸಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಈ ಕುರಿತು ಮಾತನಾಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಗ್ನಿಶ್ವರ್ ವ್ಯಾಸ್, ವಡೋದರಾ ವಿಶ್ವಾಮಿತ್ರಿ ನದಿಯ ದಡದಲ್ಲಿದೆ, ಇದು ಹೆಚ್ಚಿನ ಸಂಖ್ಯೆಯ ಮೊಸಳೆಗಳಿಗೆ ನೆಲೆಯಾಗಿದ್ದು, ಪ್ರವಾಹದಿಂದಾಗಿ ಅನೇಕ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದವು. ಈವರೆಗೆ ಸುಮಾರು 33 ಮೊಸಳೆಗಳನ್ನು ರಕ್ಷಿಸಲಾಗಿದ್ದು, ಅವುಗಳನ್ನು ವಾಪಸ್​ ನದಿಗೆ ಬಿಡಲಾಗಿದೆ. ಐದು ಮೊಸಳೆಗಳು ಪುನರ್ವಸತಿ ಕೇಂದ್ರದಲ್ಲಿದ್ದು, ಎರಡು ಮೊಸಳೆಗಳು ಆಕಸ್ಮಿಕವಾಗಿ ಮೃತಪಟ್ಟಿವೆ. ಪ್ರವಾಹದಂತಹ ಸಮಯದಲ್ಲಿ ಪ್ರಾಣಿಗಳು ಆಕಸ್ಮಿವಾಗಿ ಸಾಯುವ ಸಂಭವ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net