ಮೂರ್ಖರಾಗಬೇಡಿ… ಹಿಟ್​​ಮ್ಯಾನ್​ ಕುರಿತು ಅಂಪೈರ್​ ಅನಿಲ್ ಚೌಧರಿ​ ಹೀಗಂದಿದ್ಯಾಕೆ

Rohit Sharma

ನವದೆಹಲಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ತಮ್ಮ ಶಾಂತ ಸ್ವಭಾವದಿಂದಲೇ ಹೆಚ್ಚು ಖ್ಯಾತಿ ಪಡೆದಿರುವವರು. ಮೈದಾನದಲ್ಲಿ ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ ಅದನ್ನು ಕೂಲ್​ ಆಗಿ ನಿಭಾಯಿಸುವ ಹಿಟ್​ಮ್ಯಾನ್​ ಕೋಪಗೊಂಡಿರುವುದು ಕೆಲವೇ ಕಲವು ಸಂದರ್ಭಗಳಲ್ಲಿ ಮಾತ್ರ. ಮೈದಾನದಲ್ಲಿ ಏನಾದರೂ ಆದರೆ ಬೇಗನೆ ಮರೆಯುವ ರೋಹಿತ್​ರನ್ನು ಸ್ಮಾರ್ಟ್​ ಎಂದು ಕರೆದಿರುವ ಅಂಪೈರ್​ ಅನಿಲ್​ ಚೌಧರಿ ಹಿಟ್​ಮ್ಯಾನ್​ ಕುರಿತು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅನಿಲ್​ ಚೌಧರಿ 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್​ ಆಗಿ ಕಾರ್ಯನಿರ್ವಹಿಸಿರುವ ಇವರು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಕುರಿತು ಮಾತನಾಡಿದ್ದು, ಈ ವಿಚಾರ ಸಖತ್ ವೈರಲ್​ ಆಗುತ್ತಿದೆ. ಅನ್​ಪ್ಲಗ್ಡ್​ ಎಂಬ ಯೂಟ್ಯೂಬ್​ ಚಾನೆಲ್​ನ ಪಾಡ್​ಕಾಸ್ಟ್​ನಲ್ಲಿ ಈ ಕುರಿತು ಮಾತನಾಡಿರುವ ಅನಿಲ್​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತೆ; ಲೈಂಗಿಕ ಕಿರುಕುಳ ಆರೋಪದ ಕುರಿತು ಮೌನ ಮುರಿದ ನಟ ಜಯಸೂರ್ಯ

ನಾನು ನೋಡಿದಂತೆ ರೋಹಿತ್​ ಒಬ್ಬ ಬುದ್ಧಿವಂತ ಆಟಗಾರ. ಯಾವುದೇ ಪರಿಸ್ಥಿತಿ ಇದ್ದರೂ ಆತ ತುಂಬಾ ಕ್ಯಾಶೂಯಲ್​ ಆಗಿ ಕಾಣಿಸುತ್ತಾನೆ. ಆದರೆ, ನೀವು ಹಾಗೆಂದುಕೊಂಡು ಮೂರ್ಖರಾಗಬೇಡಿ. ಅವನ ಆಟದ ಸೆನ್ಸ್​ ತುಂಬಾ ಚೆನ್ನಾಗಿದೆ. ಆತ ಬ್ಯಾಟಿಂಗ್​ ಮಾಡುವಾಗ ಬೌಲಿಂಗ್​ ವೇಗ 120 ಕಿ.ಮೀ ಎಂದು ತೋರುತ್ತದೆ. ಆದರೆ, ಬೇರೆಯವರು ಬ್ಯಾಟಿಂಗ್​ ಮಾಡುವಾಗ 160 ಕಿ.ಮೀ ವೇಗ ತೋರುತ್ತದೆ. ಆತ ಅಂಪೈರ್​ಗಳ ಬಳಿ ಸಾಕಷ್ಟು ಮನವಿ ಮಾಡುತ್ತಾನೆ. ಆದರೆ, ಅದು ಪ್ರಾಸಂಗಿಕವಾದರೂ ಆತ ಬೇರೆ ಏನ್ನನೋ ಯೋಚನೆ ಮಾಡುತ್ತಿರುತ್ತಾನೆ.

ರೋಹಿತ್​ನಂತಹ ಆಟಗಾರರು ಫೀಲ್ಸ್​ನಲ್ಲಿರುವಾಗ ನಮಗೆ ಅಂಪೈರಿಂಗ್​ ತುಂಬಾ ಸುಲಭವಾಗುತ್ತದೆ. ಏಕೆಂದರೆ ಆತ ಯಾವುದಾದರೂ ಮನವಿ ಮಾಡುವಾಗ ಕರೆಕ್ಟ್​ ಆಗಿ ಇರುತ್ತದೆ. ಆತ ಆಡುವಾಗ ಎಂದೂ ಗೊಂದಲಕ್ಕೀಡಾಗುವುದಿಲ್ಲ. ಆತ ಬಹಳ ಸ್ಮಾರ್ಟ್​ ಇದ್ದಾನೆ ಎಂದು ಅಂಪೈರ್ ಅನಿಲ್​ ಚೌಧರಿ ರೋಹಿತ್​ ಶರ್ಮ ಕುರಿತು ಖಾಸಗಿ ಚಾನೆಲ್​ನ ಪಾಡ್​ಕ್ಯಾಸ್ಟ್​ನಲ್ಲಿ ಹೇಳಿದ್ದಾರೆ.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…