ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ

cattle
ಮುದ್ದುಮನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು
Published on

ಕೊಕ್ಕರ್ಣೆ: ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ, ಮಾತ್ರೆ ನೀಡುವುದರಿಂದ ಬರಬಹುದಾದ ಕಾಯಿಲೆಗಳನ್ನು ತಪ್ಪಿಸಬಹುದು. ಹಸುಗಳಿಗೆ ಲವಣ ಮಿಶ್ರಿತ ಆಹಾರ ನೀಡುವುದರಿಂದ ರಕ್ತಹೀನತೆ ಕಡಿಮೆ ಆಗುತ್ತದೆ. ಖನಿಜ ಮಿಶ್ರಣ ನೀಡುವುದರಿಂದ ಹಾಲಿನ ಗುಣಮಟ್ಟ ಉತ್ತಮವಾಗುತ್ತದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ ವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಹೇಳಿದರು.

ಮುದ್ದುಮನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಪ್ರತಿಮಾ ರಾಸು ವಿಮೆ, ಪಶು ಆಹಾರ ಬಳಕೆ ಬಗ್ಗೆ ಒಕ್ಕೂಟದಲ್ಲಿ ದೊರೆಯುವ ಯೋಜನೆ, ಅನುದಾನಗಳ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಮಣಿ ಶೆಡ್ತಿ, ನಿರ್ದೇಶಕರಾದ ಸೂರ್ಯನಾರಾಯಣ ಶಾಸ್ತ್ರಿ, ಸರ್ವೋತ್ತಮ ಶೆಟ್ಟಿ, ದ್ಯಾವ ನಾಯ್ಕ, ದಿನೇಶ್ ಮಡಿವಾಳ, ಪ್ರೇಮಾ ಶೆಟ್ಟಿ, ರಜನಿ ಶೆಡ್ತಿ, ವೀಣಾ, ನಾಗರತ್ನಾ, ಶೋಭಾ ಬಿ.ಶೆಟ್ಟಿ, ಅಮಿತಾ, ಅಮ್ಮಣ್ಣಿ, ಸದಸ್ಯರು, ಸಿಬ್ಬಂದಿ ವರ್ಗ, ಹೈನುಗಾರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಸ್ವಾಗತಿಸಿದರು. ಉಷಾ ವಂದಿಸಿದರು. ಬಿಎಂಸಿ ಸಿಬ್ಬಂದಿ ಉದಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net