

ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಶರಣ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಘಟಕ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ವಚನ ಹಾಗೂ ಗಮಕ ಕಲೆಗಳ ಪರಿಚಯ ಮಾಡಿಸು ವಚನ ಡಿಂಡಿಮ ವಚನಗಳ ಗಾಯನ-ವ್ಯಾಖ್ಯಾನ ಇತ್ತೀಚೆಗೆ ನಡೆಯಿತು.
ವಿದ್ವಾನ್ ಶಂಭು ಭಟ್ಟರ ಗಾಯನಕ್ಕೆ ಡಾ.ರಾಘವೇಂದ್ರ ರಾವ್ ಪಡುಬಿದ್ರಿ ವ್ಯಾಖ್ಯಾನಗೈದರು. ಡಾ.ರಾಘವೇಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು. ವಚನ ಗಾಯನದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ನಿರಂಜನ ಚೋಳಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಪ್ರೇಮಾನಂದ ವಂದಿಸಿದರು. ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಅನಂತಾದಿತ್ಯ ಪ್ರಾರ್ಥಿಸಿದರು.