ಬೀದಿನಾಯಿಗಳಿಗೆ ಲಸಿಕೆ ಅಭಿಯಾನ

Ull_Street-Dog
Published on

ಕಾಸರಗೋಡು: ಬೀದಿನಾಯಿಗಳ ಲಸಿಕಾ ಅಭಿಯಾನ ಎರಡನೇ ಹಂತಕ್ಕೆ 31 ಪಂಚಾಯಿತಿಗಳಲ್ಲಿ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಶು ಕಲ್ಯಾಣ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯಿತಿ ಆಡಳಿತ ಮಂಡಳಿಗಳ ವಿಶೇಷ ಆಸಕ್ತಿ, ಶ್ರಮ ಹಾಗೂ ಸಹಕಾರ ಅಭಿಯಾನದ ಯಶಸ್ಸಿಗೆ ಸಹಕಾರಿಯಾಗಿದೆ.

ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಾ. ಪಿ.ಕೆ.ಮನೋಜ ಕುಮಾರ್ ಅವರ ವಿಶೇಷ ಆಸಕ್ತಿಯ ಪ್ರಕಾರ ಪಂಚಾಯಿತಿಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಶ್ವಾನದಳ ಇಲ್ಲದ ಕಾರಣ ಆಲಪ್ಪುಳ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತರಬೇತಿ ಪಡೆದ ಶ್ವಾನದಳದ ಸದಸ್ಯರನ್ನು ಕರೆತಂದು ನಾಯಿಗಳನ್ನು ಹಿಡಿದು ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪಶುಸಂಗೋಪನಾ ಇಲಾಖೆಯಲ್ಲಿ ಜಾನುವಾರು ನಿರೀಕ್ಷಕರು ನಾಯಿಗಳಿಗೆ ಚುಚ್ಚುಮದ್ದು ನೀಡುತ್ತಿದ್ದಾರೆ.

ಯೋಜನೆ ಅನುಷ್ಠಾನಗೊಳಿಸದ 11 ಗ್ರಾಮ ಪಂಚಾಯಿತಿಗಳು ತಕ್ಷಣ ಬೀದಿನಾಯಿಗಳಿಗೆ ಲಸಿಕೆ ಹಾಕುವ ಯೋಜನೆಗೆ ತಯಾರಿ ನಡೆಸಿಕೊಳ್ಳುವಂತೆ ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net