

ವಿಜಯವಾಣಿ ಸುದ್ದಿಜಾಲ ಕಡಬ
ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಇನ್ನಿತರ ಭಾಷೆಯಂತೆ ಪ್ರಾಮುಖ್ಯ ಪಡೆದಿದೆ. ನಾವು ಮಾತೃಭಾಷೆಯಂತೆ ಆಂಗ್ಲಭಾಷೆಯನ್ನು ದಿನನಿತ್ಯ ವ್ಯವಹಾರದಲ್ಲಿ ಬಳಕೆ ಮಾಡಿಕೊಂಡರೆ ಕಷ್ಟವೆನಿಸುವುದಿಲ್ಲ. ತಳಮಟ್ಟದ ತರಗತಿಯಿಂದ ಆಂಗ್ಲಬಾಷೆಯ ಜ್ಞಾನಕ್ಕಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಸುಲಭವಾಗಿ ಅರ್ಥೈಸಿಕೊಳ್ಳುವ ರೀತಿಯ ಪುಸ್ತಕ ಹೊರತಂದಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದನ್ನು ಅಭ್ಯಸಿಸುವಂತೆ ಪಾಲಕರು ಗಮನ ನೀಡಬೇಕು ಎಂದು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಅನುರಾಧ ಹೇಳಿದರು.
ಕಡಬ ತಾಲೂಕು ಆಲಂಕಾರು ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಈಶ್ವರಗೌಡ ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ ಅರ್ಬಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಇಂದುಶೇಖರ ಶೆಟ್ಟಿ ಬರೆಪುದೆಲು, ಮುಖ್ಯಶಿಕ್ಷಕಿ ಆಶಾ ಎಸ್.ರೈ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸುಪ್ರೀತಾ ಶೆಟ್ಟಿ ಸ್ವಾಗತಿಸಿದರು. ಮಮತಾ ವಂದಿಸಿದರು. ಅರ್ಚನಾ ನಿರೂಪಿಸಿದರು.