ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ! ಕೊಚ್ಚಿಹೋದ ನೂರಾರು ಮನೆಗಳು, ಸಹಾಯಕ್ಕಾಗಿ ಸ್ಥಳೀಯರ ಚೀರಾಟ | Uttarkashi

ವಿಜಯವಾಣಿ (7)
Published on

Uttarkashi: ಉತ್ತರಾಖಂಡದ ಉತ್ತರಕಾಶಿಯ ಧರಾಲಿಯಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹಕ್ಕೆ ಹಲವರು ಕೊಚ್ಚಿಹೋದ ಶಂಕೆ ವ್ಯಕ್ತವಾಗಿದೆ. ದುರಂತದ ವೇಳೆ ನೂರಾರು ಮನೆಗಳು ಕುಸಿದು ಹೋಗಿವೆ. ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ.

ಬಲವಾದ ನೀರಿನ ಅಲೆಗಳು ಮನೆಗಳ ಸಮೇತ ಕೊಚ್ಚಿಕೊಂಡು ಹೋಗಿದ್ದು, ಸಹಾಯಕ್ಕಾಗಿ ಸ್ಥಳೀಯರು ಚೀರಾಡುತ್ತಿರುವ ಭಯಾನಕ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ. ಹಠಾತ್​ ಪ್ರವಾಹದಿಂದ ಜನರ ಆಸ್ತಿಪಾಸ್ತಿಗಳು ಹಾನಿಯಾಗಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಬೆನ್ನಲ್ಲೇ ಉತ್ತರಾಖಂಡ ಪೊಲೀಸರು, ಎಸ್​ಡಿಆರ್​ಎಫ್​, ಸೇನಾ ಪಡೆ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಮಂಗಳವಾರ ಉತ್ತರಾಖಂಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆಯನ್ನು ನೀಡಿತ್ತು. ಅಂತೆಯೇ, ರಾಜ್ಯದಲ್ಲಿ ಮಳೆ ಸುರಿದಿದ್ದು, ಮೇಘಸ್ಪೋಟ ಸಂಭವಿಸಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net