ಟ್ರಂಪ್ ಸುಂಕ ಎಫೆಕ್ಟ್​! ಮತ್ತೇ ಬಾನಿಗೇರಿದ ಗೋಲ್ಡ್; ಹೀಗಿದೆ ಇಂದಿನ ಚಿನ್ನ​-ಬೆಳ್ಳಿ ದರ | Gold Rates

gold
Published on

Gold Rates: ಇನ್ನೇನು ಇಳಿಕೆಯತ್ತ ಸಾಗಬೇಕಿದ್ದ ಚಿನ್ನ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರದಿಂದ ಮತ್ತೇ ಏರಿಕೆಯತ್ತ ಮುಖಮಾಡಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕೆಲವೊಮ್ಮೆ ಏರಿಕೆಯಾಗುತ್ತವೆ ಮತ್ತು ಇಳಿಕೆಯಾಗುತ್ತವೆ. ಇತ್ತೀಚೆಗೆ, ಚಿನ್ನದ ದರಗಳು ನಿರಂತರವಾಗಿ ಕಡಿಮೆಯಾಗುವ ಲಕ್ಷಣಗಳನ್ನು ತೋರಿದ್ದೇ ಆದರೂ ಕಳೆದ ವಾರದಿಂದ ಮತ್ತೆ ಗಗನಕ್ಕೇರುವ ಹಾದಿಯನ್ನು ಹಿಡಿದಿದೆ.

ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಏರಿಕೆ ಕಂಡಿವೆ. ಟ್ರಂಪ್​ ಸುಂಕದ ಪ್ರಭಾವದಿಂದಾಗಿ ಚಿನ್ನದ ಬೆಲೆಗಳು ಸಹ ಏರುತ್ತಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಮತ್ತೊಂದೆಡೆ, ಹಬ್ಬಗಳು, ಮದುವೆ ಸಮಾರಂಭಗಳು ಸೇರಿದಂತೆ ಹಲವು ಶುಭ ಕಾರ್ಯಕ್ರಮಗಳ ಸೀಸನ್​ ಇದಾಗಿದೆ. ಇದರಿಂದಾಗಿ, ಚಿನ್ನದ ಮೇಲಿನ ಬೇಡಿಕೆ ಕೂಡ ವಿಪರೀತ ಹೆಚ್ಚಾಗಿದೆ.

ಮಂಗಳವಾರ (ಆ.05) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 820 ರೂ. ಹೆಚ್ಚಾಗಿದ್ದರೆ, 22 ಕ್ಯಾರೆಟ್ ಚಿನ್ನ 750 ರೂ. ಏರಿಕೆಯಾಗಿದೆ. ಆದಾಗ್ಯೂ, ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 2,800 ರೂ. ಏರಿಕೆಯಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ತೀವ್ರವಾಗಿ ಹೆಚ್ಚಳ ಕಂಡಿದೆ. ಪ್ರತಿ ಕೆಜಿ ಬೆಳ್ಳಿಗೆ 2 ಸಾವಿರ ರೂ. ಜಾಸ್ತಿಯಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,850 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,02,370. ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,700 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,02,220 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 93,700 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,01,350 ರೂ. ಆಗಿದೆ.

ಬೆಳ್ಳಿ ಬೆಲೆ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,15,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,25,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,25,000 ರೂ. ಇದೆ,(ಏಜೆನ್ಸೀಸ್).

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net