ಶಿವನಿಗಾಗಿ ತನ್ನ ಕತ್ತನ್ನೇ ಕೊಯ್ದುಕೊಂಡ ಭಕ್ತ: ಭಕ್ತಿಯ ಪರಾಕಾಷ್ಠೆ..?

shiva ling
ಸಾಂದರ್ಭಿಕ ಚಿತ್ರ
Published on

ಲಲಿತ್‌ಪುರ: ವ್ಯಕ್ತಿಯೊಬ್ಬ ಶಿವನ ಮೆಚ್ಚಿಸಲು ಮರ ಕಡಿಯುವ ಯಂತ್ರವನ್ನು ಬಳಸಿ ತನ್ನ ತಲೆಯನ್ನು ತಾನೇ ಕತ್ತರಿಸಿಕೊಳ್ಳಲು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಲಲಿತ್​ಪುರದಲ್ಲಿ ನಡೆದಿದೆ.

ದೀಪಕ್ ಕುಶ್ವಾಹ ಎಂಬಾತನೇ ದೇವರನ್ನು ಮೆಚ್ಚಿಸಲು ಹೋಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ವೃತ್ತಿಯಿಂದ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ದೈವಿ ಭಕ್ತನಾಗಿದ್ದ. ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ಥಳೀಯ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ‘ಜೈ ಭೋಲೆನಾಥ್’ ಎಂದು ಘೋಷಣೆ ಕೂಗುತ್ತಾ ಬಲಿಪೀಠದ ಮುಂದೆ ಮರ ಕತ್ತರಿಸುವ ಯಂತ್ರವನ್ನು ಬಳಸಿ ಕತ್ತು ಕೊಯ್ದು ಕೊಂಡಿದ್ದಾನೆ.

ಇದನ್ನೂ ಓದಿ: 150 ಅಡಿ ಟವರ್​ ಏರಿದ ಯುವಕ: ಕೆಳಗಿಳಿಸಲು ರಾತ್ರಿಯಿಡೀ ಕಾದು ಕುಳಿತ ಅಧಿಕಾರಿಗಳು, ಮುಂದೆ ಆಗಿದ್ದಿಷ್ಟು..

ಆತನ ಕೂಗು ಕೇಳಿದ ಗ್ರಾಮಸ್ಥರು ದೇವಸ್ಥಾನಕ್ಕೆ ಧಾವಿಸಿ ನೋಡಿದಾಗ ದೀಪಕ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಈ ಬಗ್ಗೆ ಆತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಈ ಕುರಿತು ಮಾತನಾಡಿದ ಆತನ ತಂದೆ ಪಲ್ತೂರಾಮ್ ಕುಶ್ವಾಹಾ, ತನ್ನ ಮಗ ಶಿವನ ನಿಷ್ಠಾವಂತ ಅನುಯಾಯಿಯಾಗಿದ್ದು ದೇವರಿಗೆ ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದ. ಕಳೆದ ಕೆಲವು ತಿಂಗಳುಗಳಲ್ಲಿ ಆತ ತನ್ನ ತಲೆಯನ್ನು ದೇವರಿಗ ಅರ್ಪಿಸುವ ಭಗವಾನ್ ಶಿವನನ್ನು ಮೆಚ್ಚಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದನು. ಸ್ವಂತ ಆತ್ಮವನ್ನು ತ್ಯಾಗ ಮಾಡುವುದು ಹುಚ್ಚುತನ ಎಂದು ಆತನಿಗೆ ಯಾವಾಗಲೂ ಹೇಳುತ್ತಿದ್ದೆ, ಅವನು ಒಂದು ತಿಂಗಳಿಂದಲೂ ಆತ್ಮ ತ್ಯಾಗ ಮಾಡಬೇಕೆಂದು ಹೇಳುತ್ತಿದ್ದ. ಆತ ದೇವರಿಗಾಗಿ ಹಲವಾರು ಪ್ರಾರ್ಥನೆ ಗೀತೆಗಳನ್ನು ಬರೆದಿದ್ದಾನೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net