

ದೆಹಲಿ: ದೇಶವು 77 ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದು. ಈ ಶುಭ ಸಂದರ್ಭದಲ್ಲಿ ಬಾಲಿವುಡ್ನ ಖ್ಯಾತ ನಟ ಭಾರತ ದೇಶದ ಪೌರತ್ವವನ್ನು ಪಡೆದಿರುವುದಾಗಿ ಘೋಷಣೆ ಮಾಡಿದ್ದಾರೆ.
ಬಾಲಿವುಡ್ನ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಈಗ ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂಸ್ತಾನಿ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಜೈ ಹಿಂದ್! ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅಕ್ಷಯ್ ಕೆನಡಾದ ಪಾಸ್ಪೋರ್ಟ್ ತ್ಯಜಿಸಿದ್ದು, ಅಂತಿಮವಾಗಿ ತಮ್ಮ ಭಾರತೀಯ ಪೌರತ್ವವನ್ನು ಮರಳಿ ಪಡೆದಿದ್ದಾರೆ. ಈ ಹಿಂದೆ ಅಕ್ಷಯ್ ತನ್ನ ಕೆನಡಾದ ಪೌರತ್ವದಿಂದಾಗಿ ಅಪಾರ ಟ್ರೋಲಿಂಗ್ಗೆ ಒಳಗಾಗಿದ್ದರು.
ಈ ವರ್ಷದ ಆರಂಭದಲ್ಲಿ, ನಟ ತನ್ನ ಕೆನಡಾದ ಪಾಸ್ಪೋರ್ಟ್ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿ, ಭಾರತೀಯ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಕ್ಷಯ್ ಈ ಹಿಂದೆ ಹೇಳಿದ್ದರು, ಆದರೆ ಕೋವಿಡ್ ಪ್ರಕ್ರಿಯೆಯಿಂದಾಗಿ ವಿಳಂಬಗೊಂಡಿತ್ತು. ಅಲ್ಲದೇ, ಸಂದರ್ಶನವೊಂದರಲ್ಲಿ, ತನ್ನ ಕೆನಡಾದ ಪೌರತ್ವದ ಹಿಂದಿನ ಕಾರಣವನ್ನು ತಿಳಿಯದೇ ಜನರು ವಿಷಯಗಳನ್ನು ಅದರ ಬಗ್ಗೆ ಮಾತನಾಡಿದಾಗ ನನಗೆ ಬೇಸರವಾಗುತ್ತದೆ. ಭಾರತವೇ ನನಗೆ ಸರ್ವಸ್ವ. ನಾನು ಎಲ್ಲವನ್ನೂ ಇಲ್ಲಿಂದಲೇ ಗಳಿಸಿದ್ದೇನೆ ಮತ್ತು ನಾನು ಸ್ವದೇಶಕ್ಕೆ ಹಿಂತಿರುಗಲು ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ಹೇಳಿದ್ದರು.(ಏಜೆನ್ಸೀಸ್)